ಜಿಲ್ಲೆ

ಗಾಂಧೀಜಿ ಆದರ್ಶ, ಮೌಲ್ಯಗಳು ಮರುಸ್ಥಾಪನೆ ಆಗಲಿ

ರಟ್ಟಿಹಳ್ಳಿ: ದೇಶಕ್ಕೆ ಸ್ವಾತಂತ್ರ್ಯಕ್ಕೆ ಅಹಿಂಸೆಯ ಮಾರ್ಗದ ಮೂಲಕ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ ಅಪಾರವಾದ ಕೊಡುಗೆ ನೀಡಿದ್ದಾರೆ. ಮಾಜಿ ಪ್ರಧಾನಿ ಲಾಲ್​ ಬಹಾದೂರ್​ ಶಾಸ್ತ್ರೀ ಅವರು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಅಧಿವೇಶನದ 100ನೇ ವರ್ಷ ಸಂಭ್ರಮಾಚರಣೆ ಹಾಗೂ ಗಾಂಧಿ ಜಯಂತಿ ನಿಮಿತ್ತ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ 1 ಕಿ.ಮೀ. ಗಾಂಧಿ ನಡಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್​ ಪಕ್ಷದ ಆದೇಶದ ಮೇರೆಗೆ ವಿನೂತನ ಗಾಂಧಿ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸು, ಆದರ್ಶಗಳು, ಉತ್ತಮ ಮೌಲ್ಯಗಳು ಮರುಸ್ಥಾಪನೆ ಆಗಬೇಕಾಗಿದೆ. ನಾವೆಲ್ಲೂರು ದೇಶಭಕ್ತಿ ಬೆಳಸಿಕೊಂಡು ರಾಷ್ಟ್ರಕ್ಕೆ ಉತ್ತಮ ಪ್ರಜೆಗಳಾಗಿ ಕೊಡುಗೆ ನೀಡಬೇಕಾಗಿದೆ ಎಂದು ಹೇಳಿದರು.

ಗಾಂಧಿ ನಡಿಗೆ ಪಾದಯಾತ್ರೆ: ಶಾಸಕ ಯು.ಬಿ. ಬಣಕಾರ ಮತ್ತು ಕಾಂಗ್ರೆಸ್​ ಪಕ್ಷದ ಮುಖಂಡರು ಪಟ್ಟಣದ ಮಹಾಲ$್ಮ ವೃತ್ತದಿಂದ ಪಾದಯಾತ್ರೆ ಆರಂಭಿಸಿ, ಭಗತ್​ಸಿಂಗ್​ ವೃತ್ತ, ಮಾಸೂರು ರಸ್ತೆ, ಶಿವಾಜಿನಗರ, ಹಳೇ ಬಸ್​ ನಿಲ್ದಾಣ, ವೀರಭದ್ರೇಶ್ವರ ಕಲ್ಯಾಣ ಮಂಟಪಕ್ಕೆ ಬಂದು ಮುಕ್ತಾಯಗೊಳಿಸಿದರು. ಕಲ್ಯಾಣ ಮಂಟಪದಲ್ಲಿ ಪಕ್ಷದ ಮುಖಂಡರು ಬೆಂಗಳೂರಿನಲ್ಲಿ ನಡೆಯುವ ಪಕ್ಷದ ನೇರ ಕಾರ್ಯಕ್ರಮವನ್ನು ಎಲ್​ಇಡಿ ಪರದೆಯಲ್ಲಿ ವೀಸಿದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ಜಿಪಂ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಕೆಎಂಎಫ್​ ನಿರ್ದೇಶಕ ಹನುಮಂತಗೌಡ ಭರಮಗೌಡ್ರ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ಸುನೀತಾ ಅಶೋಕ ದ್ಯಾವಕ್ಕಳವರ, ಮಹೇಶ ಗುಬ್ಬಿ, ಪರಮೇಶಣ್ಣ ಕಟ್ಟೇಕಾರ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ವೀರನಗೌಡ್ರ ಪ್ಯಾಟಿಗೌಡ್ರ, ರವೀಂದ್ರ ಮುದಿಯಪ್ಪನವರ, ವಸಂತ್​ ದ್ಯಾವಕ್ಕಳವರ, ವಿನಯ ಪಾಟೀಲ, ಬಾಬುಸಾಬ ಜಡದಿ, ಅಬ್ಬಾಸ ಗೋಡಿಹಾಳ, ಸರ್ಪರಾಜ ಮಾಸೂರು, ಮಖಬುಲ್​ಸಾಬ ಮುಲ್ಲಾ, ಮಂಜಣ್ಣ ಮಾಸೂರು, ಬೀರೇಶ ಕರಡೆಣ್ಣನವರ, ಮಲ್ಲಿಕಾರ್ಜುನ ಬುರಡೀಕಟ್ಟಿ, ನಾಗನಗೌಡ ಕೋಣ್ತಿ, ನಾರಯಣಪ್ಪ ಗೌರಕ್ಕನವರ, ನಾಸೀರ್​ ಸೈಕಲ್ಗಾರ, ಎಂ.ಎಸ್​. ಪ್ರಕಾಶ, ರಮೇಶ ಭೀಮಪ್ಪನವರ, ಮಂಜಣ್ಣ ಮಾಸೂರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.