ಜಿಲ್ಲೆ

ಅನ್ಯರಾಜ್ಯದ ಕ್ಷೌರಿಕರ ನಿಯಂತ್ರಿಸಲಿ

ಪ್ರಶಾಂತ ಹೂಗಾರ

ಕಾಗವಾಡ: ತಾಲೂಕಿನಲ್ಲಿ ಅಂತಾರಾಜ್ಯ ಕ್ಷೌರಿಕರ ಅಂಗಡಿಗಳ ಅತಿಯಾದ ಹಾವಳಿಯಿಂದ ಸ್ಥಳೀಯ ಹಡಪದ ಹಾಗೂ ನಾವಿ ಸಮುದಾಯದವರ ಕ್ಷೌರಿಕ ವೃತ್ತಿಯ ಹಿತಾಸಕ್ತಿಗೆ ತೊಂದರೆಯಾಗುತ್ತಿದ್ದು, ತಾಲೂಕಾಡಳಿತ ಮತ್ತು ಸರ್ಕಾರ ಅನ್ಯ ರಾಜ್ಯದವರನ್ನು ನಿಯಂತ್ರಿಸಬೇಕು ಎಂದು ತಾಲೂಕು ಹಡಪದ, ಕ್ಷೌರಿಕ ಸಮುದಾಯದವರು ಮಂಗಳವಾರ ಉಪತಹಸೀಲ್ದಾರ್ ಅಣ್ಣಾಸಾಬ ಕೋರೆ ಅವರಿಗೆ ಸಲ್ಲಿಸಿದ್ದಾರೆ.

ಕಾಗವಾಡ ತಾಲೂಕು ಕ್ಷೌರಿಕ ಸಮುದಾಯದ ವತಿಯಿಂದ ಸಮುದಾಯದ ಹಿತಾಸಕ್ತಿ ಕಾಪಾಡುವಂತೆ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಅನಿಲ ನಾವಲಗೇರ, ಶಿವಲಿಂಗ ಸಾವಳಗಿ, ಕಾಶಿನಾಥ ಕೋರೆ, ಕುಮಾರ ಹಡಪದ ಇತರರಿದ್ದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಾತನಾಡಿದ ತಾಲೂಕು ಹಡಪದ, ಕ್ಷೌರಿಕ ಸಮುದಾಯದ ಅಧ್ಯಕ್ಷ ಅನಿಲ ನಾವಲಗೇರ,  ಕಾಗವಾಡ ತಾಲೂಕಿನ ನಾವಿ, ಸಮುದಾಯದವರು ತಲೆತಲಾಂತರದಿಂದ ಕ್ಷೌರಿಕ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕ್ಷೌರಿಕರ ಕುಟುಂಬಕ್ಕೆ ವೃತ್ತಿ ಬಿಟ್ಟು ಬೇರೆ ಆದಾಯದ ಮೂಲವಿಲ್ಲ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಉತ್ತರ ಭಾರತದಿಂದ ಬಂದು  ಕ್ಷೌರ ಅಂಗಡಿ ತೆರೆಯುತ್ತಿರುವುದರಿಂದ ಸ್ಥಳೀಯ ಕ್ಷೌರಿಕರ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಸ್ಥಳೀಯ ಗ್ರಾಪಂ, ಪುರಸಭೆ, ಪಟ್ಟಣ ಪಂಚಾಯತಿ, ತಾಲೂಕು ಆಡಳಿತ ತಮ್ಮ ಹಿತಾಸಕ್ತಿ ಕಾಪಾಡುವಂತೆ ಒತ್ತಾಯಿಸಿದರು.
ಉಪ ತಹಸೀಲ್ದಾರ್ ಅಣ್ಣಾಸಾಬ ಕೋರೆ ಮನವಿ ಸ್ವೀಕರಿಸಿ ಮೇಕಾರಿಗಳಿಗೆ ರವಾನಿಸಲಾಗುವುದೆಂದರು.

ಸಮುದಾಯದ ಶಿವಲಿಂಗ ಸಾವಳಗಿ, ಕಾಶಿನಾಥ ಕೋರೆ, ಸಂತೋಷ ನಾವಲಗೇರ, ಅಪ್ಪಾಸಾಬ ನಾವಲಗೇರ, ಪಾಂಡು ಜಾಧವ, ಅಜಿತ ಸೂರ್ಯವಂಶಿ, ಕುಮಾರ ಹಡಪದ, ಉತ್ತಮ ಸಂಕಪಾಳ, ರಾಜು ಕೋರೆ, ರವೀಂದ್ರ ಕೋರೆ, ಶಂಕರ ಕೋರೆ, ರಾಜು ಹಡಪದ, ರಘು ಹಡಪದ, ಪ್ರಶಾಂತ ನಾವಿ, ಕುಮಾರ ಕೋರೆ, ಶಿವಾನಂದ ನಾವಿ ಇತರರಿದ್ದರು.