ಜಿಲ್ಲೆ

ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಲಿ

ಗಿರೀಶ ಸಗರ

ವಿಜಯಪುರ : ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಮೂಲಕ ಅವುಗಳ ಸದುಪಯೋಗ ಪಡೆಯಬೇಕು ಎಂದು ಗ್ರಾಮೀಣ ಕೃಷಿ ಸಹಕಾರಿ ಸಂದ ಅಧ್ಯ ರಾಜು ಪಾರತನಹಳ್ಳಿ ಹೇಳಿದರು.

ಬಬಲೇಶ್ವರ ತಾಲೂಕಿನ ಕಾಖಂಡಕಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂದ ಆವರಣದಲ್ಲಿ ಇತ್ತೀಚೆಗೆ ನಡೆದ ಸಂದ 113ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಸಂದ ಸಿಇಒ ಮಹಾಂತೇಶ ಆದೆಣ್ಣಿ ವರದಿ ವಾಚನ ಮಾಡಿ, ಸಂ ಸದ್ಯದಲ್ಲಿ 3387 ಸದಸ್ಯತ್ವ ಹೊಂದಿದೆ. 2024&25 ನೇ ಸಾಲಿನಲ್ಲಿ 84 ಲ 44,000 ನಿವ್ವಳ ಲಾಭ ಹೊಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಮಾಜಿ ಅಧ್ಯ ರಜಾಕಸಾಬ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂ ಪ್ರಾರಂಭದಿಂದಲೂ ಹಿರಿಯರು ಆಶೀರ್ವಾದ ಮತ್ತು ತಮ್ಮೆಲ್ಲರ ರೈತ ಮಿತ್ರರ ಹಾಗೂ ಅಧಿಕಾರಿಗಳ ಸಹಕಾರ ದಿಂದ ಸಂ ಈ ವರ್ಷ ನಬಾರ್ಡ್​ ಬ್ಯಾಂಕಿನಿಂದ ಪ್ರಶಸ್ತಿ ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೈನಿಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಂಕ್ಕೆ ಸಹಕರಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕಿನ ಅಧಿಕಾರಿಗಳಾದ ಎಚ್​.ವೈ. ಸಿಂಗರಡ್ಡಿ, ಉಪಾಧ್ಯಕ್ಷೆ ಕಸ್ತೂರಿ ಕಲ್ಲಾರಿ, ನಿರ್ದೇಶಕರಾದ ಮಲ್ಲಪ್ಪ ಲೆಂಕಪ್ಪಗೋಳ, ನಾಗರಾಜ ಹೊನವಾಡ, ಬಸವರಾಜ ಹಕಾರಿ, ಸಂಗವ್ವ ಲಗಳಿ, ಶಂಕ್ರಪ್ಪ ಗಾಂಜಿ, ರಾಮಪ್ಪ ಜಾಧವ, ಭೀಮಪ್ಪ ದೊಡಮನಿ, ರಾಮಗೊಂಡ ಕೋಲಕಾರ, ಪ್ರೇಮಾ ಬಿದರಿ ಮತ್ತಿತರರಿದ್ದರು.

ಬಬಲೇಶ್ವರ ತಾಲೂಕಿನ ಕಾಖಂಡಕಿಯ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂದ 113ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜು ಪಾರತನಹಳ್ಳಿ, ಮಹಾಂತೇಶ ಆದೆಣ್ಣಿ ಮತ್ತಿತರರಿದ್ದಾರೆ.