ಜಿಲ್ಲೆ

ಎಲ್ಲ ರೈತರಿಗೆ ಸೌಲಭ್ಯ ತಲುಪಿಸಲಿ

ಸೋಮಲಿಂಗ ತಳವಾರ

ಗೋಕಾಕ: ಗ್ರಾಮೀಣ ಭಾಗದಲ್ಲಿ ರೈತರಿಗೆ ಪಿಕೆಪಿಎಸ್​ ಸಹಕಾರಿಯಾಗಿದೆ. ಎಲ್ಲ ರೈತರಿಗೆ ಸರ್ಕಾರದ ಮಹತ್ವಾಕಾಂೆ ಯೋಜನೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಪಿಕೆಪಿಎಸ್​ ಸದಸ್ಯರು ಪಾತೀತವಾಗಿ ಶ್ರಮಿಸಬೇಕು. ಅಂದಾಗ ಮಾತ್ರ ಸಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಕೌಜಲಗಿ ಪಿಕೆಪಿಎಸ್​ ನೂತನ ಆಡಳಿತ ಮಂಡಳಿ ವತಿಯಿಂದ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈತರಿಗೆ ಬಿಡಿಸಿಸಿ ಬ್ಯಾಂಕ್​ ಹಾಗೂ ವಿವಿಧೆಡೆಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸಂದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಎಸ್​.ಬಿ. ಲೋಕನ್ನವರ, ಅಧ್ಯ ವೆಂಕಟೇಶ ದಳವಾಯಿ, ಅರ್ಬನ್​ ಬ್ಯಾಂಕ್​ ಅಧ್ಯ ನಿಲೇಶ ಕೇವಟಿ, ಮಾಜಿ ಪಿಕೆಪಿಎಸ್​ ಅಧ್ಯ ಮಹೇಶ ಪಟ್ಟಣಶೆಟ್ಟಿ, ಮಹಾಂತೇಶ ಶಿವನಮಾರಿ, ರಾಯಪ್ಪ ಬಳ್ಳೊಳದಾರ್​, ಶಂಕರ ಜೋತಿನ್ನವರ, ಬಸವರಾಜ ಲೋಕನ್ನವರ, ಬಸು ಜೋಗಿ, ಕೀರಪ್ಪ ಪೂಜೆನ್ನವರ್​, ಶ್ರೀಶೆಲ ಗಾಣಿಗೇರ, ಶಂಕರ ಚಚಡಿ, ಶಿವರಾಯಿ ಹಳ್ಳೂರ ಇತರರರಿದ್ದರು.