ಕಕ್ಕೇರಿ: ಪ್ರತಿಯೊಬ್ಬರು ಶ್ರದ್ಧಾ, ಭಕ್ತಿಯಿಂದ ಧಾರ್ಮಿಕ, ಸತ್ಸಂಗ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಂಗೊಳ್ಳಿ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮ ಸಮಾರಂಭದಲ್ಲಿ ಮಾತನಾಡಿದರು.
ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಮಂದಿರದ ಅಧ್ಯ ಮಹಾಂತಯ್ಯ ಹಿರೇಮಠ, ಗ್ರಾಪಂ ಅಧ್ಯೆ ಕವಿತಾ ಹಂಚಿನಮನಿ, ಚನ್ನವಿರಯ್ಯ ಹಿರೇಮಠ, ದುಂಡಯ್ಯ ಹಿರೇಮಠ, ಚಿದಾನಂದ ಹಿರೇಮಠ, ಅದೃಶ್ಯ ಹಂಚಿನಮನಿ, ರಮೇಶ ಬರಡೂರ, ಮಲ್ಲಪ್ಪ ಮರಬದ, ಬಸವಣ್ಣೆಪ್ಪ ಅಗಸಿಮನಿ, ಬಸವರಾಜ ಹಿರೇಮಠ, ಈರಣ್ಣ ಯಲ್ಲಾಪುರಮಠ, ರವಿ ಹಿರೇಮಠ, ಮಲ್ಲಯ್ಯ ಹಿರೇಮಠ, ಜಗದೀಶ ಸಂಪಗಾವಿ, ವರುಣ ಸರ್ದಾರಮಠ, ಚನ್ನಬಸಯ್ಯ ದೇಗಾವಿ, ಡಾ.ಜಿ.ಎನ್.ಗೋಕಾವಿ, ಇತರರಿದ್ದರು. ಮಹಾಂತೇಶ ಹಂಚಿನಮನಿ ನಿರೂಪಿಸಿದರು.