ಜಿಲ್ಲೆ

ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಲಿ

ಅಂಕಲಗಿ: ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಪ್ಲಾಸ್ಟಿಕ್​ ಬಳಕೆ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿ, ಕಳೆದ 4 ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಮಾರ್ಗ ಮಧ್ಯದ ಗ್ರಾಮಗಳಲ್ಲಿ ವನ್ಯಜಿವಿ ಪರಿಸರ ಸಂರಣೆ ಮತ್ತು ಪ್ಲಾಸ್ಟಿಕ್​ ಬಳಕೆ ನಿಷೇಧಕ್ಕೆ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾನೀಯ ಎಂದರು. ಪಾದಯಾತ್ರೆ ಸಂಚಾಲಕರಾದ ಶಂಕರ ಗೊಡಗೇರಿ, ಈರಣ್ಣ ಮದವಾಲ, ಆನಂದ ಅತ್ತುಗೋಳ, ಸಿರಿಗೌಡ ನಿರ್ವಾಣಿ, ರಾಹುಲ ಪಾಟೀಲ, ಮಹೇಶ ನಿರ್ವಾಣಿ, ರಾಜು ತಿಳಗಂಜಿ, ಅಜೇಯ ಚೌಗಲಾ ಇತರರಿದ್ದರು.