ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸೌಂದರ್ಯ ವರ್ಧಕ ತಜ್ಞೆ ಡಾ.ಭಾಗ್ಯಶ್ರೀ ಅಂಕದ ಅವರನ್ನು ಸನ್ಮಾನಿಸಲಾಯಿತು. ಸುಧಾಕರ ಶಿರೋಳ, ಚಿನ್ನಪ್ಪ ಕಳಸನ್ನವರ, ಮಂಜುನಾಥ ಹೊನ್ನುಂಗರ, ರವೀಂದ್ರ ಹರವಿ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಲಿ

ರಾಮದುರ್ಗ: ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಅಂತಹ ಸೇವೆಯಲ್ಲಿ ಇದ್ದು, ಸಮಾಜ ಸೇವೆ ಹಾಗೂ ಬಡಜನರ ಆರೋಗ್ಯದ ಕಾಳಜಿ ವಹಿಸುವುದು ಮುಖ್ಯ ಎಂದು ಮನಿಹಾಳ ಗ್ರಾಮದ ರಾಮದುರ್ಗ ತಾಲೂಕು ರೂರಲ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸುಧಾಕರ ಶಿರೋಳ ಹೇಳಿದರು.

ಪಟ್ಟಣದಲ್ಲಿ ಮನಿಹಾಳ-ಸುರೇಬಾನ ಗ್ರಾಮದ ದಿ. ರಾಮದುರ್ಗ ತಾಲೂಕು ರೂರಲ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿಯ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಚರ್ಮರೋಗ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಚರ್ಮರೋಗ ಮತ್ತು ಸೌಂದರ್ಯ ವರ್ಧಕ ತಜ್ಞೆ ಡಾ.ಭಾಗ್ಯಶ್ರೀ ಅಂಕದ ಅವರು 80ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ನಡೆಸಿದರು. ಡಾ.ಭಾಗ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.

ಸೊಸೈಟಿಯ ಅಧ್ಯಕ್ಷ ಚಿನ್ನಪ್ಪ ಕಳಸನ್ನವರ, ನಿರ್ದೇಶಕರಾದ ಮಂಜುನಾಥ ಹೊನ್ನುಂಗರ, ರವೀಂದ್ರ ಹರವಿ, ಬುಡನೇಸಾಬ ನವದಿ, ರಾಚಪ್ಪ ಪಾತಾಳಿ, ಮನಿಹಾಳ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ ಗೊಣಬಾಳ ಸೇರಿ ಸೊಸೈಟಿ ಸಿಬ್ಬಂದಿ ಇತರರಿದ್ದರು.