ಕೆ.ಎಂ.ದೊಡ್ಡಿಯಲ್ಲಿ ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಮದ್ದೂರು ಶಾಸಕ ಕದಲೂರು ಉದಯ್ ಅವರಿಗೆ ‘ಮೌನ ಸಾಧಕ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.  
ಜಿಲ್ಲೆ

ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರ ಇರಲಿ

ಮಾದೇಶ್ ತಿ.ನರಸೀಪುರ

ಕೆ.ಎಂ.ದೊಡ್ಡಿ: ಪಟ್ಟಣದ ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಮದ್ದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕದಲೂರು ಉದಯ್ ಅವರಿಗೆ ‘ಮೌನ ಸಾಧಕ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪಟ್ಟಣದಲ್ಲಿ ಭಾನುವಾರ ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಂಗೈಯಲ್ಲಿ ಆರೋಗ್ಯ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯ ಡಾ.ಆಂಜನಪ್ಪ ಮಾತನಾಡಿ, ಪ್ರತಿನಿತ್ಯ ಆಹಾರ ಕ್ರಮವನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು, ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮಗಳನ್ನು ರೂಢಿಸಿಕೊಂಡು ಜೀವನ ನಡೆಸಬೇಕು. ಮನುಷ್ಯ ಯಾವುದೇ ಕಾಯಿಲೆಗಳಿಗೆ ಧೃತಿಗೆಡದೆ ಕಾರ್ಯಪ್ರವೃತ್ತರಾಗಬೇಕು, ಜನತೆ ಧೂಮಪಾನ, ಮದ್ಯಪಾನಗಳಂತ ದುಶ್ಚಟಗಳಿಂದ ದೂರವಿರಬೇಕು. ವಿಜ್ಞಾನವನ್ನು ನಂಬಬೇಕು, ಮೌಢ್ಯವನ್ನು ಧಿಕ್ಕರಿಸಬೇಕು ಎಂದು ತಿಳಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾಸಕ ಕದಲೂರು ಉದಯ್, ಪ್ರಶಸ್ತಿ, ಪುರಸ್ಕಾರಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ. ನಾನು ಯಾವತ್ತೂ ಪ್ರಶಸ್ತಿಗಳಿಗೆ ಆಸೆ ಪಟ್ಟವನಲ್ಲ. ಅಭಿಮಾನದಿಂದ ನೀವು ನೀಡುವ ಗೌರವ ನನ್ನನ್ನು ಕ್ಷೇತ್ರದ ಅಭಿವೃದ್ದಿಗೆ ಮತ್ತಷ್ಟು ಕೆಲಸ ಮಾಡಲು ಪುಷ್ಟಿ ನೀಡುತ್ತವೆ. ನೀವು ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದರು.

ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ. ಹುಲಿಕಲ್ ನಟರಾಜು ಅವರು ವಿವಿಧ ಪವಾಡಗಳ ಕುರಿತು ಜನರಿಗೆ ಅರಿವು ಮೂಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ. ಬಸವರಾಜು, ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ವಕೀಲ ಸತ್ಯಪ್ಪ, ಕೆ.ಕೆ.ಹಳ್ಳಿ ಮಾದೇಗೌಡ, ಆತಗೂರು ವೆಂಕಟಾಚಲಯ್ಯ, ಮಹದೇವಯ್ಯ, ವಸಂತಾ ವೆಂಕಟಾಚಲಯ್ಯ, ಜಾಣಪ್ಪ, ಮುಡೀನಹಳ್ಳಿ ತಿಮ್ಮಯ್ಯ, ಕರಡಕೆರೆ ಮನು ಇತರರು ಇದ್ದರು.

27ಏಒಆ-1 ಕೆ.ಎಂ.ದೊಡ್ಡಿಯಲ್ಲಿ ಡಾ. ಜೈಭೀಮ್ ದಲಿತ ಜಾಗೃತಿ ಸಮಿತಿ ವತಿಯಿಂದ ಮದ್ದೂರು ಶಾಸಕ ಕದಲೂರು ಉದಯ್ ಅವರಿಗೆ ‘ಮೌನ ಸಾಧಕ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.