ಮುಧೋಳದ ನಗರದ ಬಳ್ಳೂರ ಆರ್‌ಸಿಯಲ್ಲಿರುವ ಸದಾಶಿವ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಮಾಹಿತಿ ಕಾರ್ಯಾಗಾರದಲ್ಲಿ ಮಹೇಶ ಪತ್ತಾರ ಮಾಹಿತಿ ನೀಡಿದರು. ಪ್ರಾಚಾರ್ಯ ವೈ.ಎಸ್. ಸವನೂರ, ವೈ.ಆರ್. ದಾಸಪ್ಪನವರ, ಕೋಶಾಧ್ಯಕ್ಷ ಎಂ.ಎನ್. ನಾಲವತ್ತವಾಡ ಇದ್ದರು. 
ಜಿಲ್ಲೆ

ರಾಷ್ಟ್ರಗೀತೆಗೆ ಎಲ್ಲರೂ ಗೌರವ ನೀಡಲಿ

ಗಿರೀಶ ಸಗರ

ಮುಧೋಳ: ಭಾರತದ ಭಾವಿ ಭವಿಷ್ಯದಲ್ಲಿ ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜದ ಮಾಹಿತಿ ನೀಡುವ ಜತೆಗೆ ರಾಷ್ಟ್ರಗೀತೆಗೆ ಗೌರವ ಕೊಡುವ ನಿಟ್ಟಿನಲ್ಲಿ ನಾವು ಪಾಲಿಸಬೇಕಾದ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಬಾಗಲಕೋಟೆ ಜಿಲ್ಲಾ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಮಹೇಶ ಪತ್ತಾರ ಹೇಳಿದರು.

ನಗರದ ಬಳ್ಳೂರ ಆರ್‌ಸಿಯಲ್ಲಿರುವ ಸದಾಶಿವ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ವೈ.ಎಸ್. ಸವನೂರ ಅಧ್ಯಕ್ಷತೆ ವಹಿಸಿದ್ದರು. ವೈ.ಆರ್. ದಾಸಪ್ಪನವರ, ಕೋಶಾಧ್ಯಕ್ಷ ಎಂ.ಎನ್. ನಾಲವತ್ತವಾಡ ಇದ್ದರು.

ಸದಾಶಿವ ಬಿಇಡಿ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.