ನರಗುಂದ: ಶರಣರ ವಚನಗಳನ್ನು ಅಳವಡಿಸಿಕೊಂಡು ಜೀವನ ಪಾವನವಾಗಿಸಿಕೊಳ್ಳಲು ಶರಣ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿದೆ. ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳುವ ಶರಣರ ಅನುಭಾವ ನುಡಿಗಳ ಮಹತ್ವದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ನೆಮ್ಮದಿ ಕಾಣಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಎಂ. ಜಾಬಣ್ಣವರ ತಿಳಿಸಿದರು.
ಪಟ್ಟಣದ ಅಧ್ಯಾಪಕನಗರ ಬಡಾವಣೆಯ ಶ್ರೀರಾಮ ಗೃಹ ನಿರ್ಮಾಣ ಸಂಘದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಶಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ ಮಾತನಾಡಿ, ಜ.18 ಹಾಗೂ 19ರಂದು ಚಿತ್ರದುರ್ಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಜರುಗಲಿದೆ. ಬೆಲ್ಲಾಳದ ಶರಣರು ಸಮಾರಂಭದ ಗೌರವಾಧ್ಯಕ್ಷರಾಗಿದ್ದಾರೆ. ತಾಲೂಕಿನ ಶರಣ ಸಾಹಿತ್ಯ ಪರಿಷತ್‌ದಿಂದ ಹೆಚ್ಚಿನ ಜನರು ಕಾರ್ಯಕ್ರಮಕ್ಕೆ ತೆರಳಬೇಕು ಎಂದು ಮನವಿ ಮಾಡಿದರು.
ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಉಪಾಧ್ಯಕ್ಷರಾಗಿ ಡಿ.ಆರ್. ಗದ್ದನಕೇರಿ ಹಾಗೂ ಗಂಗಮ್ಮ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಘಾಳಿ, ಖಜಾಂಚಿ ರವಿ ಹುಂಬಿ, ಸಂಘಟನಾ ಕಾರ್ಯದರ್ಶಿ ಅಜ್ಜಪ್ಪ ಹೌದಕ್ಕನವರ, ಎಸ್.ಎಸ್. ಪೂಜಾರ, ಕಸಾಪ ಪ್ರತಿನಿಧಿಯಾಗಿ ಪ್ರೊ. ಬಿ.ಸಿ. ಹನುಮಂತಗೌಡ್ರ, ಮಹಿಳಾ ಪ್ರತಿನಿಧಿಯಾಗಿ ಸುಕನ್ಯಾ ಸಾಲಿ, ಮಾಧ್ಯಮ ಪ್ರತಿನಿಧಿಯಾಗಿ ಸಿ.ಬಿ. ಸುಬೇದಾರ, ಗೌರವ ಸಲಹೆಗಾರರಾಗಿ ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ವಿ.ಎನ್. ಕೊಳ್ಳಿಯವರ, ಎಚ್.ಬಿ. ಅಸೂಟಿ, ಪಿ.ಎಸ್. ಅಣ್ಣಿಗೇರಿ, ಎಸ್.ವೈ. ಹುಂಬಿ, ಎಂ.ಎಸ್. ಯಾವಗಲ್, ಎಂ.ಪಿ. ಕುಲಕರ್ಣಿ, ಬಿ.ಎಂ. ಬೆಳಹಾರ, ಬಿ.ಎಂ. ಅಳಗವಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ.ಆರ್. ಉಳ್ಳೇಗಡ್ಡಿ, ಎಚ್.ಎ. ಮುದಿಯಪ್ಪನವರ, ಡಾ.ಬಿ.ವೈ. ಹಲಕುರ್ಕಿ, ನಿರ್ಮಲಾ ಚಂದ್ರತ್ನವರ, ಕುಮುದಿನಿ ದೊಡಮನಿ, ಲೀಲಕ್ಕ ಹಸಬಿ, ರಮೇಶ ಮೋಟೆ, ಎಸ್.ಬಿ. ಭಜಂತ್ರಿ, ಆರ್.ಬಿ. ಚಿನಿವಾಲರ, ನಾಗರತ್ನಾ ಜಾಧವ, ಕೆ.ಎನ್. ಹದಗಲ್, ಮಾರುತಿ ಬೋಸಲೆ, ಜೆ.ಆರ್. ಕದಂ, ನೀಲಕಂಠ ಮಡಿವಾಳರ, ಶಿವಲೀಲಾ ಹಿರೇಮಠ, ವೈ.ಎ. ಕುಂಬಾರ, ಜಿ.ಬಿ. ಕಲ್ಲನಗೌಡ್ರ, ಮನೋಜ ಗಡ್ಡಿ, ಕಾವ್ಯಾ ಹುಂಬಿ, ಜ್ಯೋತಿ ಯಳ್ಳೂರ, ಗಿರಿಜಮ್ಮ ಮಠಪತಿ ಆಯ್ಕೆಯಾಗಿದ್ದಾರೆ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು.