ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ನಿಮ್ಮ ಪ್ರಾಣ, ನಂಬಿರುವ ಕುಟುಂಬದವರ ಪ್ರಾಣ. ಸಾರ್ವಜನಿಕ ಆಸ್ತಿ ಹಾನಿ ಮಾಡುವುದನ್ನು ತಡೆಯಿರಿ ಎಂದು ನಗರಠಾಣೆ ಎಸ್.ಐ.ವೇಣುಗೋಪಾಲ್ ಹೇಳಿದರು.
ನಗರದ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಕಾಲೇಜುಗಳ ಮುಖ್ಯಸ್ಥರು ಮತ್ತು ವಾಹನ ಚಾಲಕರ ಸಭೆಯಲ್ಲಿ ಮಾತನಾಡಿ, ಚಲಾಯಿಸುವ ಮುನ್ನ ವಾಹನ ಸುಸ್ಥಿತಿಯಲ್ಲಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬ್ರೇಕ್, ಲೈಟ್, ಟೈರ್, ಮಿರರ್ ಇತ್ಯಾದಿ ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ನೋಡಿಕೊಳ್ಳಬೇಕು. ಸೀಟ್ ಬೆಲ್ಟ್ ಧರಿಸಿ, ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು. ಐಎಸ್ಐ ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಸುರತ.
ರಸ್ತೆಗೆ ಇಳಿದ ನಂತರ ಮುಖ್ಯರಸ್ತೆ, ವೃತ್ತಗಳಲ್ಲಿ ಸಂಚಾರಿ ನಿಯಮಗಳ ಸಿಗ್ನಲ್ ಮತ್ತು ಚಿಹ್ನೆಗಳನ್ನು ನೋಡಿಕೊಳ್ಳಿ. ವೇಗ ನಿಯಂತ್ರಣದಲ್ಲಿರಲಿ. ನಿಗದಿಪಡಿಸಿದ ವೇಗವನ್ನು ಮೀರಬೇಡಿ. ಮುಖ್ಯವಾಗಿ ವಾಹನ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡುವುದು, ಹಾಡು ಕೇಳುವುದು, ವಿಡಿಯೋಗಳನ್ನು ನೋಡುವುದು ಮಾಡಬೇಡಿ.ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಬೇಡ ಎಂದರು.
ಇನ್ನು ಶಾಲೆ, ಆಸ್ಪತ್ರೆ, ಜನ ವಸತಿ ಪ್ರದೇಶಗಳ ಬಳಿ ಸಾಧ್ಯವಾದಷ್ಟು ನಿಧಾನವಾಗಿ ಚಲಾಯಿಸಿ. ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ, ತಿರುವುಗಳಲ್ಲಿ ಎಚ್ಚರಿಕೆವಹಿಸಿ.ಶಾಲಾ&ಕಾಲೇಜು ಮಕ್ಕಳನ್ನು ಕರೆ ತರುವ ವಾಹನಗಳ ಚಾಲಕರು ಬೇರೆಲ್ಲಾ ವಾಹನಗಳ ಚಾಲಕರಿಗಿಂತಲೂ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು, ಭವಿಷ್ಯದ ಪ್ರಜೆಗಳು
ವಾಹನದಲ್ಲಿರಲಿದ್ದು ಜಾಗ್ರತೆ ವಹಿಸಬೇಕು ಎಂದರು.