ಬಿ.ಲಿಂಗಪ್ಪ 
ಜಿಲ್ಲೆ

ಸಂಘಟಿತ ಹೋರಾಟಕ್ಕೆ ಎಲ್ಲರೂ ಕೈಜೋಡಿಸಲಿ

ಗಾಯತ್ರಿ ಮಾಲಿಪಾಟೀಲ್

ರಾಯಚೂರು: ಭಾರತ ಕಮ್ಯುನಿಷ್ಟ ಪಕ್ಷ (ಮಾಕ್ಸವಾದಿ) ಪ್ರಾರಂಭವಾಗಿ 50 ವರ್ಷ ಪೂರ್ಣಗೊಂಡ ನಿಮಿತ್ತ ವರ್ಷ ಪೂರ್ತಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಅ.9ರಂದು ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಗುತ್ತದೆ ಎಂದು ಪಕ್ಷದ ಆಚರಣೆ ಸಮಿತಿ ಅಧ್ಯಕ್ಷ ಬಿ.ಲಿಂಗಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1975ರಲ್ಲಿ ಜಿಲ್ಲೆಯಲ್ಲಿ ಸಿಪಿಐ(ಎಂ) ಪಕ್ಷ ಆರಂಭವಾಗಿತ್ತು. ಭೂ ಮಾಲೀಕರ ವಿರುದ್ಧ ಹಾಗೂ ವಿವಿಧ ಸಮಸ್ಯೆಗಳಿಗಾಗಿ ರೈತರು, ಕಾರ್ಮಿಕರು, ಮಹಿಳೆಯರು ಸಿಪಿಐ(ಎಂ)ನಿಂದ ಯಶಸ್ವಿ ಹೋರಾಟ ನಡೆಸಿದ ಇತಿಹಾಸವಿದೆ. ತುಂಗಭದ್ರಾ ಎಡದಂಡೆ, ನಾರಾಯಣಪುರ ಬಲದಂಡೆ ಕಾಲುವೆ ಜಾರಿಗೆ ಪಕ್ಷದಿಂದ ಹೋರಾಟ ನಡೆಸಲಾಗಿದೆ. ಸಮಸ್ಯೆಗಳಿಗೆ ಪರಿಹಾರ ದೊರಕದೇ ನಿರಂತರ ಹೋರಾಟ ನಡೆಸಲು ಆಚರಣಾ ಸಮಿತಿ ನಿರ್ಧರಿಸಿದೆ ಎಂದರು.

ಪಕ್ಷದ ಗೌರವ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಸ್ಥಳೀಯರಿಗೆ ಉದ್ಯೋಗ ನೀಡಿ ನಿರುದ್ಯೋಗ ನಿವಾರಿಸಬೇಕೆಂದು ಆರ್‌ಟಿಪಿಎಸ್ ಪ್ರಾರಂಭಿಸಲಾಗಿತ್ತು. ಇದರ ಫಲವಾಗಿ ಸ್ಥಳೀಯ 750 ಜನ ಉದ್ಯೋಗ ಪಡೆದರು. ಸಂಘಟಿತ ಹೋರಾಟಕ್ಕೆ ಎಲ್ಲರೂ ಒಂದಾಗಲು ನಿರ್ಧರಿಸಲಾಗಿದೆ. ಬ್ರಿಟಿಷರ ವಿರುದ್ಧ ದೇಶ ಬಿಟ್ಟುತೊಲಗಿ ಎನ್ನುವ ಹೋರಾಟ ನಡೆದಿತ್ತು. ಈಗ ಕಾರ್ಪೋರೇಟ್, ಕೋಮುವಾದಿಗಳು ಸಾರ್ವಜನಿಕ ಜೀವನದಿಂದ ತೊಲಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಹೋರಾಟ ನಡೆಸಲಾಗುತ್ತದೆ ಎಂದುತಿಳಿಸಿದರು.

ಪ್ರಮುಖರಾದ ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ, ಬಸವಂತ್ರಾಯಗೌಡ, ಬಿ.ಬಸವರಾಜ ಇತರರಿದ್ದರು.