ಮೂಗೂರು: ಶರಣರ ಕಾಯಕ ನಿಷ್ಠೆಯನ್ನು ಮರೆತರೆ ವ್ಯಕ್ತಿ ಬದುಕಿನುದ್ದಕ್ಕೂ ಯಶಸ್ಸು ಕಾಣಲು ಹೆಣಗಾಡ ಬೇಕಾಗುತ್ತದೆ ಎಂದು ಹಲವಾರ ಮಠಾಧ್ಯಕ್ಷ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮೂಗೂರು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಮನೆ-ಮನೆಗಳಿಗೆ ಶರಣರ ಸಂದೇಶ ತಾಲೂಕು ಸಮಿತಿ ವತಿಯಿಂದ ನಡೆದ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನೆಯ ಹಿರಿಯರಲ್ಲಿ ಸಂಸ್ಕಾರ ದಿನೇ ದಿನೆ ಕಣ್ಮರೆಯಾಗುತ್ತಿದ್ದು, ಯುವ ಪೀಳಿಗೆ ಅಡ್ಡ ದಾರಿ ಹಿಡಿಯುತ್ತಿದೆ ಇದರಿಂದಾಗಿ ಮನೆಯಲ್ಲಿ ಸಂಪತ್ತು ಎಷ್ಟೇ ಇದರೂ ಜ್ಞಾನ, ಅರಿವಿನ ಕೊರತೆಯಿಂದ ಸಮುದಾಯ ಏಳಿಗೆ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ಚಿಂತನೆಗಳನ್ನು ಮನದಲ್ಲಿ ಪಠಿಸುವಂತಾಗಬೇಕು. ನಮ್ಮ ಆಲೋಚನೆಗಳು ಶ್ರೀಮಂತವಾಗಿರಬೇಕು ಶರಣರ ಸಂದೇಶವನ್ನು ಮನೆ ಮನೆಯಲ್ಲೂ ಬಿತ್ತುವ ಕಾಯಕ ಆಗಬೇಕು ಎಂದರು.
ವಾಟಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ಸಿದ್ದಲಿಂಗ ಸ್ವಾಮೀಜಿ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪ್ರಕಾಶ್, ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸುಗಂಧರಾಜು, ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ, ಮಹಾಸಭಾ ನಿರ್ದೇಶಕ ಕುಮಾರ್, ತೊಟ್ಟವಾಡಿ ಚಂದ್ರದರ್, ಶಿವಕುಮಾರ್, ಹೊಸೂರುಹುಂಡಿ ತೋಂಟೇಶ್, ನಟರಾಜು, ಜ್ಞಾನೇಂದ್ರಮೂರ್ತಿ, ಮೂಗೂರು ಕುಮಾರಸ್ವಾಮಿ, ಚೇತನ್ ಪಟೇಲ್, ಎಂ.ಬಿ.ಮಹೇಂದ್ರ ಕುಮಾರ್, ಹೊಸಹಳ್ಳಿ ಗ್ರಾಮದ ಬಸವ ಬಳಗದ ಪದಾಧಿಕಾರಿಗಳು ಇತರರು ಇದ್ದರು.