ರೋಣ ಪಟ್ಟಣದ ಎಲ್.ಐ. ದಿಂಡೂರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಡಾ.ಅವಿನಾಶ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ ಪಾಟೀಲ, ಗೊಳಪ್ಪ ರವಾದಿ, ಡಾ. ಎಂ.ಎಂ. ಕಟ್ಟಿಮನಿ ಇತರರಿದ್ದರು. 
ಜಿಲ್ಲೆ

ಮಹನೀಯರ ಆದರ್ಶ ಎಲ್ಲರೂ ಪಾಲಿಸಲಿ

ರೋಣ: ವೈದ್ಯಕೀಯ ವೃತ್ತಿಯಲ್ಲಿ ಹೆಸರಾದ ಡಾ. ಬಿ.ಸಿ.ರಾಯ್ ಸ್ಮರಣಾರ್ಥ ಆಚರಿಸುವ ವೈದ್ಯ ದಿನಾಚರಣೆ ಮಹತ್ವವನ್ನು ಎಲ್ಲರೂ ಅರಿಯಬೇಕು. ಡಾ.ರಾಯ್ ಅವಅಂಥ ಮಹನೀಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಡಾ.ಭೀಮಸೇನ ಜೋಶಿ ತಾಲೂಕು ಸರ್ಕಾರಿ ಆಸ್ಪತ್ರೆಯ ದಂತ ತಜ್ಞ ಡಾ.ಅವಿನಾಶ ಜಿ.ಎಂ. ಹೇಳಿದರು.

ಇಲ್ಲಿನ ಎಲ್. ಐ. ದಿಂಡೂರ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಹಲ್ಲುಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು’ ಎಂದರು.

ಡಾ. ಎಂ.ಎಂ. ಕಟ್ಟಿಮನಿ ಮಾತನಾಡಿ, ಕಾಯಿಲೆ ಬಂದ ಮೇಲೆ ತೊಂದರೆ ಪಡುವ ಬದಲು ಕಾಯಿಲೆ ಬಾರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು. ಶಾರದಾ ತಿಮ್ಮನಗೌಡ್ರ, ಮಂಜುನಾಥ ಪಾಟೀಲ, ಫಾತಿಮಾ ಗದಕರ, ಶಶಿಕಲಾ ಆದಿ, ಗೊಳಪ್ಪ ರವಾದಿ ಇತರರಿದ್ದರು.