ಜಿಲ್ಲೆ

ಪ್ರತಿಯೊಬ್ಬರೂ ಸ್ವಉದ್ಯೋಗದಲ್ಲಿ ತೊಡಗಿಕೊಳ್ಳಲಿ

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ: ಬಡತನ ಮತ್ತು ದುರ್ಬಲತೆ ಕಡಿಮೆ ಮಾಡಲು ಅವರಿಗೆ ಲಾಭದಾಯಕ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಸೀರೆ ಕುಚ್ಚು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಸದಸ್ಯರೂ ಈ ತರಬೇತಿಯಲ್ಲಿ ಭಾಗವಹಿಸಿ ತಾವೂ ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಲಯ ಯೋಜನಾಧಿಕಾರಿ ಉಮಾ ಎನ್.ಜಿ. ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಲಯ ಕಾರ್ಯಕ್ಷೇತ್ರದ ಸಂಘ ಸದಸ್ಯರು ಹಾಗೂ ಸಹಾಯ ಸಂಘಗಳ ಫಲಾನುಭವಿಗಳಿಗೆ ಉಚಿತ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಕೇಂದ್ರದ ಸದಸ್ಯರಿಗೆ 15 ದಿನದ ಆಯೋಜಿಸಿರುವ ಸೀರೆ ಕುಚ್ಚು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕಾಗಿ ಸ್ವಉದ್ಯೋಗ ರೂಢಿಸಿಕೊಳ್ಳಲು ಮಹಿಳೆ ಕೌಶಲಾಭಿವೃದ್ಧಿ ಯೋಜನೆ ಮಹತ್ವದ್ದಾಗಿದ್ದು, ಈ ಯೋಜನೆ ಮೂಲಕ ಮಹಿಳೆಯರು ಸ್ವ-ಉದ್ಯೋಗ ಸೃಷ್ಟಿಸಿಕೊಂಡು ಸಮಾಜದಲ್ಲಿ ಬೆಳೆಯಬೇಕು ಎಂದರು.

ಧಾರವಾಡ ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಭಾಸ್ಕರ್ ಎನ್., ಶಿಗ್ಗಾಂವಿ ವಲಯದ ಮೇಲ್ವಿಚಾರಕರಾದ ಮೈಲಾರಿ ರಾಮನಾಳ, ಜ್ಞಾನವಿಕಾಸ ಸಮನ್ವಯಾಧಿಕಾರಿ ರಾಧಿಕಾ ಜಿ.ಬಿ., ತರಬೇತಿ ಶಿಕ್ಷಕರಾದ ಲಕ್ಷ್ಮೀ ಕಾಡಪ್ಪನವರ ಸೇರಿ ಸಂಘದ ತರಬೇತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.