ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಕ್ಲಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಲಬ್ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. 
ಜಿಲ್ಲೆ

ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲಿ

ಎಂ.ರವಿ

ಬೆಟ್ಟದಪುರ: ಶಿಕ್ಷಣದಲ್ಲಿ ಪಾಠದಷ್ಟೇ ಆಟವೂ ಮುಖ್ಯ. ಕ್ರೀಡೆಯಲ್ಲಿಯೂ ಆಸಕ್ತಿ ಬೆಳಸಿಕೊಂಡರೆ ಸಾಧನೆಯ ಹಾದಿಯಲ್ಲಿ ನಡೆಯಬಹುದು ಎಂದು ರಾಷ್ಟ್ರೀಯ ಮಾಸ್ಟರ್ ಅಥ್ಲೀಟ್ಸ್ ಗೋಣಿಕೊಪ್ಪಲಿನ ಪಡಿಕಲ್ ಕುಸುಮಾವತಿ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕ್ರೀಡಾ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜತೆಗೆ ಆರ್ಥಿಕವಾಗಿಯೂ ಮುನ್ನಡೆಯುವಂತೆ ಮಾಡಿದೆ. ಪ್ರತಿಯೊಬ್ಬರೂ ಉತ್ತಮ ಕ್ರೀಡಾಪಟುಗಳ ಆದರ್ಶ ಇಟ್ಟುಕೊಂಡು ಅವರಂತೆ ಬೆಳೆಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಡಯಟ್ ನಿವೃತ್ತ ಪ್ರಾಧ್ಯಾಪಕ ಆರ್.ಎಸ್.ದೊಡ್ಡಣ್ಣ, ಅನಿಕೇತನ ಕಾಲೇಜಿನ ಕಾರ್ಯದರ್ಶಿ ಡಾ.ಜೆ ಸೋಮಣ್ಣ, ಉಪನ್ಯಾಸಕರಾದ ಅಭಿಜಿತ್, ಶಿವನಂಜು, ಚೇತನ್ ಇದ್ದರು.