ಜಿಲ್ಲೆ

ಎಲ್ಲರೂ ನಿಸರ್ಗ ರಕ್ಷಣೆಗೆ ಮುಂದಾಗಲಿ

ಪ್ರಶಾಂತ ಹೂಗಾರ

ಉಳ್ಳಾಗಡ್ಡಿ-ಖಾನಾಪುರ: ಮರಗಳನ್ನು ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಹಾಗಾಗಿ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಹತ್ತರಗಿ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಹತ್ತರಗಿ ಕಾರಿಮಠದಲ್ಲಿ ಸರ್ಕಾರಿ ಶಾಲೆ ಹಾಗೂ ಯಮಕನಮರಡಿ ಪತ್ರಕರ್ತರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಡಿ, ಶಾಲಾ ಮಕ್ಕಳಲ್ಲಿ ಪರಿಸರ ಕುರಿತು ಪ್ರಜ್ಞೆ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಕಿ ಶಿಲ್ಪಾ ಭರಮಗೌಡ ಮಾತನಾಡಿ, ಎಲ್ಲರೂ ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಉಪನ್ಯಾಸಕ ನೀಲಕಂಠ ಬೋಮ್ಮನ್ನವರ ಮಾತನಾಡಿ, ಪ್ರತಿಯೊಬ್ಬರೂ ಒಂದು ಸಸಿ ನೆಡುವ ಮೂಲಕ ಜನ್ಮದಿನ ಆಚರಿಸಿಕೊಳ್ಳಬೇಕು ಎಂದರು.

ಹುಕ್ಕೇರಿ ತಾಲೂಕು ವಲಯ ಅರಣ್ಯಾಧಿಕಾರಿ ಬಿ.ಎಲ್.ಸನದಿ ಮಾತನಾಡಿದರು. ಯಮಕನಮರಡಿ ಉಪತಹಸೀಲ್ದಾರ್ ಸಿ.ಆರ್.ಶೀಗಿಹೊಳಿ, ದಡ್ಡಿ ವಲಯ ಅರಣ್ಯಾಧಿಕಾರಿ ಪ್ರಭು ತಂಗಡಿ, ಅರಣ್ಯ ಇಲಾಖೆಯ ಹನುಮಂತ ಚೆನ್ನದಾಸರ, ಉಪನ್ಯಾಸಕರಾದ ನಿಲಕಂಠ ಬೊಮ್ಮನ್ನವರ, ಪಿಎಸ್‌ಐ ಆರ್.ವಿ. ಪಾಟೀಲ, ಎಸ್.ಎಂ.ಚಿಕ್ಕನ್ನವರ, ಶ್ರೀಶೈಲ ಪಿಟಗಿ, ವರದಿಗಾರರಾದ ಗೋಪಾಲ ಚಿಪಣಿ, ಎ.ಎಂ.ಕರ್ನಾಚಿ, ಸಂಜೀವ ಮುಷ್ಠಗಿ, ಬಿ.ಬಿ.ಕೋತೆಕರ, ಕಲ್ಲಪ್ಪ ಪಾಮನಾಯಿಕ, ಪ್ರಭು ಖೋತ ಇತರರಿದ್ದರು. ಶಿಕ್ಷಕಿ ಕವಿತಾ ಪಾಟೀಲ ನಿರೂಪಿಸಿದರು.