ತುಬಚಿ ಗ್ರಾಮದಲ್ಲಿ ಮಂಗಳವಾರ ಅಂಬೇಡ್ಕರ್ ಅವರ 134ನೇ ಜಯಂತಿ ಆಚರಿಸಲಾಯಿತು. ಪರಶುರಾಮ್ ಸಿಂಗೆ, ಆನಂದ ದೂಪದಳ, ಮುತ್ತಪ್ಪ ಕುಂಬಾರ, ಅಪ್ಪಾಸಾಬ ಬಿರಾದಾರ, ಮಾದೇವ ಬ್ಯಾಡಗಿ, ನಿಂಗಪ್ಪ ಬೋರ್ಯಾಳ, ಅಶೋಕ ಗೌಡಪ್ಪನವರ, ಬಸವರಾಜ ಪಾಟೀಲ, ಅನಿಲ ಸಿಂಧೂರ, ವಿನಯ ಪಾಟೀಲ, ಬಸವರಾಜ ಬಿರಾದಾರ ಮತ್ತಿತರರಿದ್ದಾರೆ. 
ಜಿಲ್ಲೆ

ಪ್ರತಿ ಪ್ರಜೆಯೂ ಅಂಬೇಡ್ಕರ್ ಅವರನ್ನು ಸ್ಮರಿಸಲಿ

ವಿನಯ ಆಶೋಕ ನಾಯ್ಕ

ತುಬುಚಿ: ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದ್ದರು ಎಂದು ಪಿಕೆಪಿಎಸ್ ನಿರ್ದೇಶಕ ಪರಶುರಾಮ್ ಸಿಂಗೆ ಹೇಳಿದರು.

ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಪ್ರತಿ ಪ್ರಜೆಯೂ ಸಹ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು. ಅವರು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತ ಸಂವಿಧಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಮುಖ್ಯ ಶಿಕ್ಷಕ ಆನಂದ ದೂಪದಳ ಮಾತನಾಡಿ, ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜತೆಯಲ್ಲಿ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅವರ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ ದೊರಕುತ್ತಿವೆ ಎಂದರು.

ಗ್ರಾಮದ ಹಿರಿಯರಾದ ಮುತ್ತಪ್ಪ ಕುಂಬಾರ, ಅಪ್ಪಾಸಾಬ ಬಿರಾದಾರ, ಮಾದೇವ ಬ್ಯಾಡಗಿ, ನಿಂಗಪ್ಪ ಬೋರ್ಯಾಳ, ಅಶೋಕ ಗೌಡಪ್ಪನವರ, ಬಸವರಾಜ ಪಾಟೀಲ, ಅನಿಲ ಸಿಂಧೂರ, ವಿನಯ ಪಾಟೀಲ, ಬಸವರಾಜ ಬಿರಾದಾರ, ರಾಜು ಬೋರ್ಯಾಳ, ಅಪಸಾಬ ಕುರಿ, ಶ್ರೀಪತಿ ಬ್ಯಾಡಗಿ, ರಮೇಶ ಕುರಿ, ಹನಮಂತ ಕಾಂಬಳೆ, ಭಗವಂತ ಮುತ್ತಪ್ಪಗೊಳ, ಅಶೋಕ ಯಳಮೇಲಿ, ಪಾವಡಿ ಗುಂಡೆವಾಡಿ, ತುಕಾರಾಮ ಹಿಡಕಲ ಮತ್ತಿತರರಿದ್ದರು.