ಜಿಲ್ಲೆ

ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸುವ ಕಾರ್ಯವಾಗಲಿ

ಮುಗಳಿಹಾಳ: ಮಕ್ಕಳ ಸರ್ವಾಂಗೀಣ ಪ್ರಗತಿಯಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ, ಶಿಕ್ಷಣ ಜತೆಗೆ ಸಂಸ್ಕಾರ ಬೆಳೆಸುವ ಕಾರ್ಯವಾಗಬೇಕು ಎಂದು ಸಿಆರ್‌ಪಿ ವಿಠ್ಠಲ ದಳವಾಯಿ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು ಸಮುದಾಯದ ಸಹಭಾಗಿತ್ವದೊಂದಿಗೆ ಮುನ್ನಡೆಯಬೇಕಿದೆ. ಶಾಲೆ ಅಭಿವೃದ್ಧಿಗೆ ಹಳೆೆಯ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ದಳವಾಯಿ, ಸಿಆರ್‌ಪಿ ಎಂ.ಎಂ.ಮಲಕನ್ನವರ, ಗ್ರಾಪಂ ಮಾಜಿ ಅಧ್ಯಕ್ಷ ವಿಠ್ಠಲ ದಳವಾಯಿ, ಸಿಆರ್‌ಪಿ ಬಾಳೇಶ ಶಿದ್ದಬಸನ್ನವರ, ಶಿಕ್ಷಣ ಸಂಯೋಜಕ ಎಂ.ಬಿ.ಕಡಕೋಳ, ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಕಂಬಾರ, ನೌಕರರ ಸಂಘದ ನಿರ್ದೇಶಕ ವಿ.ಎಂ ಮೆಳವಂಕಿ,

ಮುಖ್ಯಶಿಕ್ಷಕಿ ಎಸ್.ಜಿ.ಗಣಾಚಾರಿಮಠ, ಮಲ್ಲೇಶ ಕಡಕೋಳ, ಎಪಿಎಂಸಿ ಸದಸ್ಯ ಲಕ್ಷ್ಮಣ ದಳವಾಯಿ, ಗ್ರಾಪಂ ಸದಸ್ಯ ರಾಮಸಿದ್ದಪ್ಪ ಧರ್ಮಟ್ಟಿ, ಪದ್ಮಾವತಿ ಮುರಗಟ್ಟಿ, ಎಸ್‌ಡಿಎಂಸಿ ಸದಸ್ಯರಾದ ದುರಗಪ್ಪ ದಳವಾಯಿ, ಫಕೀರಪ್ಪ ದಳವಾಯಿ, ಈರಪ್ಪ ಕತ್ತಿ, ಸಿದ್ದರಾಯ ಹುಲಕುಂದ, ಪರಸಪ್ಪ ಅದ್ದುಗೋಳ, ಸೋಮಲಿಂಗ ಶಾಸ್ತ್ರಿ ಇತರರಿದ್ದರು. ಶಿಕ್ಷಕ ಬೀರಪ್ಪ ಅದ್ದುಗೋಳ ನಿರೂಪಿಸಿದರು. ಶಿಕ್ಷಕಿ ಕೆಎಂ ಹುರುಳಿ ವಂದಿಸಿದರು.