ಅಥಣಿ: ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ರೋಟರಿ
ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಪಟ್ಟಣದ ಪ್ರಶಾಂತ ನಗರದಲ್ಲಿ ರೋಟರಿ ಕ್ಲಬ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ ಮಾತನಾಡಿದರು. ಡಾ.ಪಿ.ಪಿ.ಮಿರಜ, ಸಚಿನ ಮಿರಜ, ಶೇಖರ ಕೊಲಾರ, ಭರತ ಸೊಮಯ್ಯ, ಅನಿಲ ದೇಶಪಾಂಡೆ, ಶ್ರೀಕಾಂತ ಅಥಣಿ, ಮೇಘರಾಜ ಪರಮಾರ, ಸುರೇಶ ಪಾಟೀಲ, ತೃಪ್ತಿ ಕುಲಕರ್ಣಿ, ವೈಶಾಲಿ ಮಠಪತಿ, ಲಲಿತಾ ಮೆಕನಮರಡಿ, ವರ್ಷಾರಾಣಿ ಮೇತ್ರಿ, ಬಾಳಪ್ಪ ಬುಕಿಟಗಾರ, ಸಿದ್ದು ಸಂಕ್ರಟ್ಟಿ, ಪ್ರಫುಲ್ ಪಡನಾಡ, ಮೋಹನ ಕಾಂಬಳೆ, ಬಾಹುಬಲಿ ಯರಂಡೊಲಿ, ಶೈಲೇಶ ಜಾಧವ ಇದ್ದರು.