ವೇಮಗಲ್: ಸಹಕಾರ ಸಂದಲ್ಲಿ ನೀವು ನೀಡುವ ಸಾಲಗಳು ಮರುಪಾವತಿಯಾಗಬೇಕು. ಅದರೊಂದಿಗೆ ಸಂದ ಲಾಭಾಂಶ ಷೇರುದಾರರಿಗೆ, ರೈತರಿಗೆ, ಬಡವರಿಗೆ ಮತ್ತು ಮಹಿಳೆಯರಿಗೆ ದೊರೆಯುವಂತೆ ಸಹಕಾರಿ ಸಂ ಶ್ರಮಿಸಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ದಿ.ವಿ.ಎಸ್.ರಾಮಶೆಟ್ಟಿ ಅವರ 48ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಕೇಂದ್ರ ಸರ್ಕಾರವೇ ಪಂಚಾಯಿತಿಗೊಂದು ಸಹಕಾರ ಸಂ ತೆರಿಯಿರಿ ಎಂದು ಹೇಳಿತ್ತಿದೆ. ಅದರಂತೆ ತೆರೆದಾಗ ಆ ಭಾಗದವರಿಗೆ ಕೆಲಸವೂ ಸಿಗುತ್ತದೆ, ರೈತರಿಗೆ ಅನುಕೂಲವಾಗುತ್ತದೆ. ವೇಮಗಲ್ ಸಹಕಾರ ಸಂದಲ್ಲಿ 34 ಹಳ್ಳಿಯವರಿದ್ದಾರೆ. ಬೆಳಮಾನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಂಟಿಕೊಂಡಿದೆ. ಅವರಿಗೆ ವೇಮಗಲ್ ಸುಮಾರು 12 ಕಿ.ಮೀ. ದೂರ ಆಗುತ್ತದೆ. ಕುರುಗಲ್ ಗ್ರಾಪಂ ದಾಟಿ ವೇಮಗಲ್ಗೆ ಬರಬೇಕು. ಅಲ್ಲಿಯೇ
ಒಂದು ಸೊಸೈಟಿ ತೆರೆದಾಗ ಯಾವುದೇ ತೊಂದರೆ ಆಗುವುದಿಲ್ಲ. ಅಭಿವೃದ್ಧಿ ಜತೆಗೆ ಅವಕಾಶವೂ ಸಿಗುತ್ತದೆ. ಇದಕ್ಕೆ ಬೆಳಮಾನಹಳ್ಳಿಯ ಸದಸ್ಯರು
ಚರ್ಚಿಸಿದರೆ ಉತ್ತಮ ಎಂದರು.
ಸಹಕಾರ ಸಂದ ಅಧ್ಯಕ್ಷ ಶೆಟ್ಟಳ್ಳಿ ನಂಜುಂಡಪ್ಪ ಮಾತನಾಡಿ, ದಿ.ವಿ.ಎಸ್.ರಾಮಶೆಟ್ಟಿ ಮತ್ತು ಸಿ.ಬೈರೇಗೌಡರ ದೂರದೃಷ್ಟಿಯೇ ವೇಮಗಲ್ ಅಭಿವೃದ್ಧಿಗೆ ಸಾ. ವೇಮಗಲ್ ಜನತೆ ಇಂದಿಗೂ ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಸ್ಮರಿಸಿದರು.