ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ಸದಸ್ಯರು ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು. ರಮೇಶ ಮಸಬಿನಾಳ, ಪ್ರಕಾಶ ಮಲ್ಲಾರಿ, ಕಾಸುಗೌಡ ಬಿರಾದಾರ ಇತರರಿದ್ದರು. 
ಜಿಲ್ಲೆ

ದೇವರಹಿಪ್ಪರಗಿ ವಿಜಯಪುರ ಜಿಲ್ಲೆಯಲ್ಲಿರಲಿ

ದತ್ತಾತ್ರೇಯ ಪಿ ಕುಲಕರ್ಣಿ

ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ಸದಸ್ಯರು ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮಂಗಳವಾರ ಆಗಮಿಸಿದ ಪಟ್ಟಣ ಪಂಚಾಯಿತಿ ಸದಸ್ಯರು ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಸೃಜಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ದೇವರಹಿಪ್ಪರಗಿ ತಾಲೂಕನ್ನು ನೂತನ ಜಿಲ್ಲೆಗೆ ಪರಿಗಣಿಸದೇ ಮೂಲ ಜಿಲ್ಲೆ ವಿಜಯಪುರದಲ್ಲಿಯೇ ಮುಂದುವರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಹಾಗೂ ಪ್ರಕಾಶ ಮಲ್ಲಾರಿ ಮಾತನಾಡಿ, ದೇವರಹಿಪ್ಪರಗಿ ತಾಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ 30ಕಿಮೀ ಸನಿಹದಲ್ಲಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ನೇರಸಂಪರ್ಕ ಹೊಂದಿದ್ದು, ಎಲ್ಲ ವಾಣಿಜ್ಯ, ವ್ಯಾಪಾರ ಸೇರಿದಂತೆ ದೈನಂದಿನ ವಹಿವಾಟುಗಳನ್ನು ಅವಲಂಬಿಸಿದೆ. ಆದ್ದರಿಂದ ವಿಜಯಪುರ ಜಿಲ್ಲೆ ತಾಲೂಕಿನ ಜನತೆಯ ಆದ್ಯತೆಯಾಗಿದೆ ಎಂದರು.

ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಶೀನಾಥ ಭಜಂತ್ರಿ, ಉಮೇಶ ರೂಗಿ, ಸುಮಂಗಲಾ ಸೇಬೆನವರ, ಕಾಶೀನಾಥ ಜಮಾದಾರ, ಸಿಂಧೂರ ಡಾಲೇರ್, ಹುಸೇನ್ ಕೊಕಟನೂರ, ಪ್ರಮುಖರಾದ ಸೋಮು ದೇವೂರ, ನಬಿರಸೂಲ್ ಮಣೂರ, ಬಸಪ್ಪ ದೇವಣಗಾಂವ, ಕಾಶೀನಾಥ ಕಡ್ಲೇವಾಡ, ಅಬ್ದುಲ್ಲಾ ಬಾಗವಾನ ಇದ್ದರು.