ಬ್ರಹ್ಮದೇವನಮಡು: ನಮ್ಮ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿದರ ಹೊಂದಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವ್ಯವಸ್ಥಾಪಕ ಎಂ.ಎನ್. ಮಸಳಿ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದು, ತ್ವರಿತವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಿದ್ಧರಾಗಿದ್ದೇವೆ. ಗ್ರಾಹಕರು ಬ್ಯಾಂಕ್ ಏಳಿಗೆ ಕೈ ಜೋಡಿಸಬೇಕು ಎಂದರು.
ಕ್ಷೇತ್ರಾಧಿಕಾರಿ ಎಂ.ಬಿ. ಕುಲಕಣಿರ ಮಾತನಾಡಿದರು.
ಗ್ರಾಹಕರಾದ ಶಿವಪುತ್ರಯ್ಶ ಮಠ, ಡಾ. ಸಿದ್ರಾಮಪ್ಪ ಗಡಗಿ, ಬಗವಂತ್ರಾಯಗೌಡ ಬಗಲೂರ, ಎ.ಡಿ. ಕೋರವಾರ, ಸಿಬ್ಬಂದಿ ಟಿ.ಎಂ. ಕೊಡೇಕಲ್ಲ, ಡಿ.ಬಿ. ಪಾಟೀಲ, ಪಿಗ್ಮಿ ಏಜೆಂಟ್ ಎ.ಬಿ. ಭಜಂತ್ರಿ ಇತರರಿದ್ದರು.