ಲಿಂಗಸುಗೂರು ಎಸಿ ಅವಿನಾಶ ಶಿಂಧೆಗೆ ಕರವೇ ಕಾರ್ಯಕರ್ತರು ಮಂಗಳವಾರ ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಕಾರ್ಯಕರ್ತರಾದ ಹನುಮಂತ ನಾಯಕ, ರವಿಕುಮಾರ ಬರಗುಡಿ, ಅಲ್ಲಾವುದ್ದೀನ್ ಬಾಬಾ, ಆರೀಫ್, ಪ್ರಭು ಕಾಳಾಪುರ, ರಮೇಶ, ಖಾದರ್, ಶಬ್ಬೀರ್, ಮಲ್ಲೇಶ ಇತರರಿದ್ದರು. 
ಜಿಲ್ಲೆ

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ

ರುದ್ರಪ್ಪ ವಾಲಿ

ಲಿಂಗಸುಗೂರು: ತಾಲೂಕಿನಲ್ಲಿ ಹಾಯ್ದು ಹೋದ ಬೀದರ್-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಸಿ ಅವಿನಾಶ ಶಿಂಧೆಗೆ ಮಂಗಳವಾರ ಮನವಿ ಸಲ್ಲಿಸಿದರು.

ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ರಸ್ತೆ ವಿಸ್ತರಣೆ ವೇಳೆ ರೈತರ ಹೆಚ್ಚುವರಿ ಜಮೀನು ಬಳಕೆ ಮಾಡಿದ್ದು, ಪರಿಹಾರ ನೀಡದೆ ಕಂಗಾಲಾಗುವಂತೆ ಮಾಡಿದೆ. ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

ಕಾಮಗಾರಿ ನಡೆಯುವ ರಸ್ತೆಯಲ್ಲಿ ಗುತ್ತಿಗೆದಾರರು ರಸ್ತೆಗೆ ಕೇವಲ ಮರಂ ಹಾಕಿ ಕೈಬಿಟ್ಟಿದ್ದಾರೆ. ಇದರಿಂದ ಮಳೆ ಬಂದರೆ ರಸ್ತೆ ಮೇಲೆ ನೀರು ನಿಂತು ತಗ್ಗು-ಗುಂಡಿಗಳು ನೀರಿನಿಂದ ಆವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೆಲ ವಾಹನಗಳು ಅಪಘಾತಕ್ಕೀಡಾಗಿ ಪ್ರಾಣಾಪಾಯಕ್ಕೆ ಅಪಾಯ ತಂದೊಡ್ಡಿವೆ ಎಂದರು.

ಪ್ರಾಣಾಪಾಯ

ಕಾರ್ಯಕರ್ತರಾದ ಕಾರ್ತಿಕ್ ನಾಯಕ, ಇಮ್ತಿಯಾಜ್, ಬಸವರಾಜ, ನವಾಜ್, ಜಾವೀದ್, ರಿಯಾಜ್, ಹನುಮಂತ ಭಜಂತ್ರಿ, ಗುರುರಾಜ, ವೀರೇಶ ಪಾಟೀಲ್, ಮೌನೇಶ ಇತರರಿದ್ದರು.