ಕೆರೂರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ದೆಗಳಿಗೆ ಪಪಂ ಮಾಜಿ ಅಧ್ಯಕ್ಷ ಸದಾನಂದ ಮದಿ ಚಾಲನೆ ನೀಡಿ ಮಾತನಾಡಿದರು. ಪಪಂ ಮಖ್ಯಾಧಿಕಾರಿ ರಮೇಶ ಮಾಡಬಾಳ, ದೈಹಿಕ ಶಿಕ್ಷಕ ಆರ್. ಬಿ. ಬಿಲ್ಲಾರ್, ಪಪಂ ಸಿಬ್ಬಂದಿ ನವೀನ ಮಹಾಜನವರ್ ಇತರರಿದ್ದರು. 
ಜಿಲ್ಲೆ

ಪೌರಕಾರ್ಮಿಕರು ಕ್ರೀಡೆಯಲ್ಲಿ ಭಾಗವಹಿಸಲಿ

ಕೆರೂರ: ದಿನನಿತ್ಯ ಮಳೆ, ಚಳಿ, ಬಿಸಿಲು ಎನ್ನದೆ ಪಟ್ಟಣ ಸೌಂದರ್ಯವಾಗಿಡಲು ಹಗಲಿರುಳು ದುಡಿಯುತ್ತಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಪಪಂ ಮಾಜಿ ಅಧ್ಯಕ್ಷ ಸದಾನಂದ ಮದಿ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌರಕಾರ್ಮಿಕರು ಕೆಲಸದ ಬಿಡುವಿನ ವೇಳೆ ಕ್ರೀಡೆಯಲ್ಲಿ ಭಾಗವಹಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಪಪಂ ಮಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ಪೌರಕಾರ್ಮಿಕರು ಕೆಲಸದ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಸ್ವಚ್ಛತೆ ಮಾಡುವಾಗ ಮುಖಕ್ಕೆ ಮಾಸ್ಕ್, ಕೈಗಳಿಗೆ ಕೈಗವಚ ಧರಿಸಬೇಕು ಎಂದು ಸಲಹೆ ನೀಡಿದರು.

ಮಹಿಳಾ ಪೌರಕಾರ್ಮಿಕರಿಗಾಗಿ ಹಗ್ಗ ಜಗ್ಗಾಟ, ಲೇಮನ್ ಸ್ಫೂನ್, ಮ್ಯೂಸಿಕಲ್, ಪುರಷರಿಗಾಗಿ ಗುಂಡು ಎಸೆತ, ರನ್ನಿಂಗ್, ಕ್ರೀಡೆ ಏರ್ಪಡಿಸಲಾಗಿತ್ತು. ಕ್ರೀಡೆಯಲ್ಲಿ ವಿಜೇತರಾದವರಿಗೆ ಪೌರಕಾರ್ಮಿಕರ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದು.

ದೈಹಿಕ ಶಿಕ್ಷಕ ಆರ್. ಬಿ. ಬಿಲ್ಲಾರ್, ಪಪಂ ಸಿಬ್ಬಂದಿ ನವೀನ ಮಹಾಜನವರ್, ಪೌರಕಾರ್ಮಿಕರಾದ ಕರಿಯವ್ವ ಮಾದರ, ಕಾಕವ್ವ, ರೇಣವ್ವ ಮಾದರ, ಹರೀಶ ಮಾದರ, ದುರ್ಗಪ್ಪ ಮಾದರ ಇತರರಿದ್ದರು.