ಹೊಳೆನರಸೀಪುರದದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಜ್ಞಾನಪ್ರಕಾಶ್ ಉದ್ಘಾಟಿಸಿದರು. ರಾಜು, ಮಹೇಂದ್ರ ಪ್ರಸಾದ್, ರಶ್ಮಿ ಇದ್ದರು. 
ಜಿಲ್ಲೆ

ನಕಾರಾತ್ಮಕ ವಿಚಾರದಲ್ಲಿ ಮಕ್ಕಳು ವಿವೇಚನೆಯಿಂದ ಮುನ್ನಡೆಯಲಿ

ಹೊಳೆನರಸೀಪುರ: ಸಾಮಾಜಿಕ ಜಾಲತಾಣಗಳ ಆಕರ್ಷಣೆ, ಅತಿಯಾದ ಮೊಬೈಲ್ ಬಳಕೆಯಿಂದ ಪ್ರಸ್ತುತ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ನಕಾರಾತ್ಮಕ ವಿಚಾರದಲ್ಲಿ ವಿವೇಚನೆಯಿಂದ ಮುನ್ನಡೆಯಬೇಕಾಗಿದೆ ಎಂದು ಮುರಾರ್ಜಿ ಕಾಲೇಜು ಪ್ರಾಂಶುಪಾಲ ಜ್ಞಾನಪ್ರಕಾಶ್ ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಗೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಒತ್ತಡ, ಪರೀಕ್ಷಾ ಭಯ ಮಕ್ಕಳನ್ನು ಖಿನ್ನತೆಗೊಳಗಾಸಿಸುತ್ತಿದೆ. ಪಾಲಕರು ಈ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳದರು.

ಕಾಲೇಜು ಪ್ರಾಂಶುಪಾಲ ಟಿ.ವೈ.ರಾಜು ಮಾತನಾಡಿ, ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಬೇಕು. ಜತೆಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಉಪ ಪ್ರಾಂಶುಪಾಲ ಮಹೇಂದ್ರಪ್ರಸಾದ್ ಮಾತನಾಡಿ, ಮನುಷ್ಯ- ಮನುಷ್ಯನನ್ನು ಪ್ರೀತಿಸುವಂತಾದಾಗ ಮನುಷ್ಯ ಜಾತಿಗೆ ಸಾರ್ಥಕತೆ ಉಂಟಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಲ್ಲವಿ ಮಧುಸೂದನ್, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ರವೀಶ್, ಮುಖ್ಯ ಶಿಕ್ಷಕಿ ರಶ್ಮಿ, ಮುರಾರ್ಜಿ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಭೈರವ್, ಭೌತಶಾಸ್ತ್ರ ಉಪನ್ಯಾಸಕಿ ನೂರ್ ಪಿರುದೋಸ್ ಹಾಜರಿದ್ದರು.