ಜಿಲ್ಲೆ

ಮಕ್ಕಳಿಂದ ಕಂಪ್ಯೂಟರ್ ಸದ್ಬಳಕೆಯಾಗಲಿ

ವಿದ್ಯಾ ಶೆಟ್ಟನಗೌಡ್ರ

ಅಥಣಿ ಗ್ರಾಮೀಣ: ಎಲ್ಲ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮಹತ್ವ ಪಡೆದಿದೆ. ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೆ ಅನಕ್ಷರಸ್ಥರೆಂದು ಪರಿಗಣಿಸುವ ಕಾಲ ಬರಬಹುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಅವರಖೋಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಐಸಿಟಿ ಯೋಜನೆಯಲ್ಲಿ ಮಂಜೂರಾದ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಕಂಪ್ಯೂಟರ್ ಲ್ಯಾಬ್‌ನಿಂದ ಮಕ್ಕಳ ಕಲಿಕೆ ವೇಗ ಹೆಚ್ಚಲಿದೆ. ವಿದ್ಯಾರ್ಥಿಗಳು ಕಂಪ್ಯೂಟರ್ ಬಳಸಿಕೊಂಡು ಹೊಸ ಸವಾಲು, ಸ್ಪರ್ಧೆ ಎದುರಿಸಲು ಸಜ್ಜಾಗಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಪ್ಪ ಮುಂಜೆ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್ ಲ್ಯಾಬ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಮಹಾದೇವ ಬಿಳಿಕುರಿ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಅಶೋಕ ಲಡಗಿ, ಬೀರಪ್ಪ ಲೋಕೂರ, ದಶರಥ ಸಾಳುಂಕೆ, ಶಿವಬಸು ನಾಯಿಕ, ದಶರಥ ಕಾಂಬಳೆ, ಮುಖ್ಯಶಿಕ್ಷಕ ಎ.ಎ.ರಾಮತೀರ್ಥ, ಎಂ.ಪಿ.ಚನ್ನಗೌಡರ, ಎಚ್.ಎಂ.ತೇಲಿ, ಬಿ.ಎ.ಹಳಿಂಗಳಿ, ಎಸ್.ಆರ್.ಗೌಡಪ್ಪನವರ, ಎಸ್.ಎಸ್.ಪೋಳ ಇತರರಿದ್ದರು.