ಜಿಲ್ಲೆ

ಮಕ್ಕಳು ವೈಜ್ಞಾನಿಕ ಮನೋಭಾವ ಹೊಂದಲಿ

ಪ್ರಶಾಂತ ಹೂಗಾರ

ಮಾಂಜರಿ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಾಯೋಗಿಕ ಕಲಿಕೆ ಅತ್ಯಗತ್ಯ ಎಂದು ಮಾಜಿ ಶಾಸಕ ಕೆ.ಪಿ.ಮಗೆನ್ನವರ ಹೇಳಿದರು.

ಗ್ರಾಮದ ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ ಕೆ.ಪಿ.ಮಗೆಣ್ಣವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವುಬಾಯಿ ನರವಾಡೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಉಮರಾನೆ ಕರೆ ಮಾತನಾಡಿ, ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆ ಅಗತ್ಯ. ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಹೊಸತನ್ನು ಕಲಿತು ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಶೀತಲ ಮಗೆನ್ನವರ ಹಾಗೂ ಕುಮದಾ ನಾಯಕ ಮಾತನಾಡಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ 155 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಖ್ಯಶಿಕ್ಷಕಿ ಕುಮದಾ ನಾಯಕ, ಸಾಗರ ಮಂಗಸೋಳೆ, ಸದಾಶಿವ ಮಿರ್ಜಿ, ಜೈ ಜಿನೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲ್ ಮಗೆನ್ನವರ, ಚಂದ್ರಕಾಂತ ಪಾಟೀಲ ಇತರರಿದ್ದರು. ಶಿಕ್ಷಕಿ ನಜಮಾ ನೆಜಕರ ಸ್ವಾಗತಿಸಿದರು. ಕೀರ್ತಿ ಕೋರೆ ನಿರೂಪಿಸಿದರು. ಮನೀಶ ಖೋತ್ ವಂದಿಸಿದರು.