ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ದಸರಾ ರಜೆಯ ನಂತರ ಶಾಲಾ ಚಟುವಟಿಕೆ ಆರಂಭಿಸಲಾಯಿತು. ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ, ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಂಬ್ಲಿ, ಅಂದಪ್ಪ ಹಾರೋಗೇರಿ, ಮಲ್ಲಪ್ಪ ಕುರಿ, ಆಶಾಬಿ ಹಡಗಲಿ ಇತರರಿದ್ದರು. 
ಜಿಲ್ಲೆ

ಮಕ್ಕಳು ಪರಿಸರ ಸ್ನೇಹಿ ಅಭ್ಯಾಸ ಬೆಳೆಸಿಕೊಳ್ಳಲಿ

ರುದ್ರಪ್ಪ ವಾಲಿ

ಅಳವಂಡಿ: ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಕ್ಕಳು ಪಾಲ್ಗೊಳುವಂತೆ ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ತಿಳಿಸಿದರು. ಸಮೀಪದ ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಸರಾ ರಜೆ ನಂತರ ಶಾಲಾ ಚಟುವಟಿಕೆಗಳ ಆರಂಭವನ್ನು ಗಿಡ ನೆಡುವ ಮೂಲಕ ಗುರುವಾರ ಚಾಲನೆ ನೀಡಿ ಮಾತನಾಡಿದರು.

ನಾವು ವಾಸಿಸುವ ಪರಿಸರ ಶುದ್ಧವಾಗಿದೆಯೇ ಮತ್ತು ನಮ್ಮ ಭೂಮಿ ಭವಿಷ್ಯದ ಪೀಳಿಗೆಗೆ ಆರೋಗ್ಯಕರವಾಗಿ ಉಳಿದಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಭೂಮಿಯ ಆರೋಗ್ಯ ಕಾಪಾಡುವುದು, ಮಾಲಿನ್ಯ ತಡೆಯುವುದು, ಮರಗಳನ್ನು ಬೆಳೆಸುವ ಪರಿಸರ ಸ್ನೇಹಿ ಅಭ್ಯಾಸಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದರು.