ಕುಂಜಿಲ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಜಿಸಿದ್ದ ಶಿಕ್ಷಕರು-ಪಾಲಕರ ಸಂಘದ ಸಭೆಯಲ್ಲಿ ಸಂಸ್ಥೆ ಅಧ್ಯಕ್ಷ ಶಾಹಿದ್ ಅಲಿ ಮಾತನಾಡಿದರು . 
ಜಿಲ್ಲೆ

ಮಕ್ಕಳಿಗೆ ಬಾಲ್ಯದಲ್ಲೇ ಜ್ಞಾನಾರ್ಜನೆ ಆಗಲಿ

ಲೋಕೇಶ್ ಮನು. ಡಿ

ನಾಪೋಕ್ಲು: ಮಕ್ಕಳಿಗೆ ಜ್ಞಾನಾರ್ಜನೆಗೆ ಅವಶ್ಯಕವಾದ ವಿಚಾರಗಳನ್ನು ಬಾಲ್ಯದಲ್ಲೇ ನೀಡಬೇಕು. ತಪ್ಪಿದಲ್ಲಿ ನಂತರದ ದಿನಗಳಲ್ಲಿ ನಾವು ಅಸಹಾಯಕರಾಗ ಬೇಕಾಗುತ್ತದೆ ಎಂದು ಕುಂಜಿಲ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಅಧ್ಯಕ ಶಾಹಿದ್ ಅಲಿ ಹೇಳಿದರು.

ಇಲ್ಲಿಗೆ ಸಮೀಪದ ಕುಂಜಿಲ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಸಕ್ತ ಸಾಲಿಕ ಶೈಕ್ಷಣಿಕ ಸಾಲಿನ ಶಿಕ್ಷಕರು-ಪಾಲಕರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಶಾಲೆಗೆ ಮಕ್ಕಳನ್ನು ಸೇರಿಸಿದ ಬಳಿಕ ಜವಾಬ್ದಾರಿ ಮರೆಯದೆ ಉತ್ತಮ ನಾಗರಿಕರನ್ನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕಿ ಎಂ.ಎಂ.ಕವಿತಾ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಹಕಾರ ಅತ್ಯಗತ್ಯ, 2024-25 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಹಂತದ 17 ವಿದ್ಯಾರ್ಥಿಗಳಲ್ಲಿ, 15 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, ಇದೀಗ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಅಫ್ರಾ ಪರ್ವೀನ್ ರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿನಿಯರಾದ ಪಿ.ಎ.ಹನ್ನತ್, ಪಿ.ವೈ.ನಾಸಿಹ, ಬಿ.ಎ.ಸಮ್ರೀನ, ಪಿ. ಎ.ಮುಹಮ್ಮದ್ ಮಿಫ್ತ , ಎಂ.ಆರ್.ಮುಹಮ್ಮದ್ ಫಾಹೀಜ್, ಶಾಲಾ ಸಿಬ್ಬಂದಿ ಹಾಗೂ ಪಾಲಕರು ಇದ್ದರು.