ಲಕ್ಷ್ಮೇಶ್ವರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸದನದಲ್ಲಿ ಅವಮಾನಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಡಾ. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಬಿಜೆಪಿ ಅವರ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾ.ಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಸೋಮಣ್ಣ ಬೆಟಗೇರಿ ಮಾತನಾಡಿ, ‘ಅಂಬೇಡ್ಕರ್ ಅವರನ್ನು ಇಡಿ ದೇಶ ಪೂಜ್ಯ ಭಾವನೆಯಿಂದ ನೋಡುತ್ತಿದೆ. ಮಹಾಪುರುಷನ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಖಂಡಿಸುತ್ತೇವೆ. ಅಲ್ಲದೆ, ಸಿ.ಟಿ.ರವಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ದ ಬಳಸಿರುವ ಪದ ಇಡಿ ಮಹಿಳಾ ಕುಲಕ್ಕೆ ಅಪಮಾನ ಮಾಡಿದಂತಾಗಿದೆ’ ಎಂದರು.
ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಪದ್ಮರಾಜ ಪಾಟೀಲ, ವೀರೇಂದ್ರ ಪಾಟೀಲ, ಅಮರೀಶ ತೆಂಬದಮನಿ ಮಾತನಾಡಿದರು. ನೀಲಪ್ಪ ಶೇರಸೂರಿ, ಬಿ.ಎಂ. ಮುಂದಿನಮನಿ, ಬಸವರಾಜ ಓದುನವರ, ರಮೇಶ ಗಡದವರ ಫಿರ್ದೋಶ ಆಡೂರ, ಸಾಹೇಬಜಾನ ಹವಾಲ್ದಾರ, ಸುಲೇಮಾನಸಾಬ್ ಕಣಕೆ, ನೀಲಪ್ಪ ಪೂಜಾರ, ಮಹಾಂತೇಶ ಗುಡಿಸಲಮನಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ನೀಲಪ್ಪ ಪೂಜಾರ, ರಾಮಣ್ಣ ಅಡಗಿಮನಿ, ದಾದಾಪೀರ ಮುಚ್ಚಾಲೆ, ಯಲ್ಲಪ್ಪ ಹಂಜಗಿ, ಮುದಕಣ್ಣ ಗದ್ದಿ, ಮಂಜುನಾಥ ಶೆರಸೂರಿ, ಶೇಕಣ್ಣ ಹುರಕಡ್ಲಿ, ರಾಮಣ್ಣ ರಿತ್ತಿ, ಛಾಯಪ್ಪ ಬಸಾಪುರ, ಅಪ್ಜಲ್ ರಿತ್ತಿ, ವೀರೇಂದ್ರ ಭಜಂತ್ರಿ ಇತರರು ಇದ್ದರು. ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.