ಹೊಸಪೇಟೆ: ನವೆಂಬರ್ 10ರ ನಂತರ ಎಷ್ಟು ಜನ ಶಾಸಕರು ಕಾಂಗ್ರೆಸ್ ಬರುತ್ತಾರೆ ಎಂಬುದನ್ನು ಕಾದು ನೋಡಿ. ಅದಕ್ಕೂ ಮುನ್ನ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ವಸತಿ ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.
ಕೂಡ್ಲಿಗಿ ತಾಲೂಕಿನ ಬಿಸ್ನಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನೂ ಬಿಜೆಪಿಗೆ ಹೋಗುವುದಿಲ್ಲ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಮ್ಮದು ಒಂದೇ ಬಣ ಅದು ಕಾಂಗ್ರೆಸ್. ಆದರೆ, ಬಿಜೆಪಿಯ 65 ಶಾಸಕರನ್ನು ಅವರು ಬಿಗಿಯಾಗಿ ಇಟ್ಟುಕೊಳ್ಳಲಿ. ಮುಂದಿನ 10 ದಿನಗಳಲ್ಲಿ ಬಾಂಬ್ ಹೇಗೆ ಬ್ಲಾಸ್ಟ್ ಆಗುತ್ತದೆ ನೋಡಿ ಎಂದು ಹೆಳಿದರು.