ಚನ್ನಮ್ಮನ ಕಿತ್ತೂರು: ನಾಡಿನ ಗ್ರಾಮೀಣ ಭಜನಾ ಕಲೆ ಉಳಿಸಬೇಕಾಗಿದೆ. ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ 200ನೇ ವಿಜಯೋತ್ಸವದ ಪ್ರಯುಕ್ತ ಜಿಲ್ಲಾಡಳಿತ, ಕಿತ್ತೂರು ಅಭಿವದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸತ ಇಲಾಖೆ ಕೋಟೆ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಮುಕ್ತ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಭಜನಾ ಕಲಾವಿದರಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸಿ ಭಜನಾ ಕಲೆ ನಶಿಸಿ ಹೋಗದಂತೆ ಹಾಗೂ ಯುವಜನತೆ ಕಲೆಯತ್ತ ಒಲವು ತೋರಿಸುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ ಮಾತನಾಡಿ, ಭಜನಾ ಕಲೆ ಅಳಿದು ಹೋಗದಂತೆ ನೋಡಿಕೊಳ್ಳಲು ಈ ತರಹ ವಿಶೇಷ ವೇದಿಕೆ ನೀಡಿ, ಕಲೆ ಪ್ರೋತ್ಸಾಹಿಸಬೇಕು ಎಂದರು. ೇತ್ರ ಶಿಣಾಧಿಕಾರಿ ಸಿ.ವೆ. ತುಬಾಕದ, ಸಿಪಿಐ ಶಿವಾನಂದ ಗುಡಗನಟ್ಟಿ ಇತರರಿದ್ದರು. ಕನ್ನಡ ಮತ್ತು ಸಾಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ವಿವೇಕ ಕುರಗುಂದ ನಿರೂಪಿಸಿದರು.