ಬಿಡದಿ: ಬೆಂಗಳೂರು& ಮೈಸೂರು ಹೆದ್ದಾರಿಯ ಶೇಷಗಿರಿಹಳ್ಳಿ, ಲಕ್ಷಿ$್ಮಸಾಗರ ಗೇಟ್ ಬಳಿ ಸಂಸದ ಡಾ.ಸಿ.ಎನ್.ಮಂಜುನಾಥ್ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಶೇಷಗಿರಿಹಳ್ಳಿ ಬಳಿ ಹೆದ್ದಾರಿಯಲ್ಲಿ ನಿರ್ಮಿಸಿರುವ ಅಂಡರ್ ಪಾಸ್ ಜನರ ಬಳಕೆಗೆ ಬಂದಿಲ್ಲ ಎಂದು ಸ್ಥಳಿಯರು ದೂರು ಸಲ್ಲಿಸಿದರು. ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣ ಮಾಡಿದ್ದ ಅಂಡರ್ ಪಾಸ್ ಒಂದು ಕಡೆ ಓಪನ್ ಇದ್ದು ಮತ್ತೊಂದು ಕಡೆ ಓಪನ್ ಮಾಡದೆ ಹಾಗೆ ಬಿಟ್ಟಿದ್ದಾರೆ. ಹೆದ್ದಾರಿ ದಾಟಲು ಸುತ್ತಿ ಬಳಸಿ ಬರಬೇಕಾಗಿದೆ. ವಂಡರ್ ಲಾ ಗೇಟ್ ಬಳಿಗೆ ಹೋಗಿ ತಿರುವು ಪಡೆದು ಬರಬೇಕಾಗಿದೆ. ಅಂಡರ್ ಪಾಸ್ ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಸಂಸದರೆ ಖುದ್ದಾಗಿ ಮಂಗಳವಾರ ಅಂಡರ್ಪಾಸ್ ಸ್ಥಳ ವೀಣೆ ಮಾಡಿದರು. ಪಕ್ಕದ ಜಮೀನಿನಲ್ಲಿ ಜಾಗ ಖರೀದಿ ಮಾಡಿ ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕಿದೆ ಎಂದು ಸ್ಥಳಿಯರು ಸಂಸದರ ಗಮನಕ್ಕೆ ತಂದರು.
ಸ್ಕೆವಾಕ್ ನಿರ್ಮಾಣವಾಗಲಿ
ಇನ್ನು ಲಕ್ಷ್ಮೀಸಾಗರ ಗೇಟ್ ಬಳಿ ಹೆದ್ದಾರಿ ದಾಟಲು ಸ್ಕೆ$ವಾಕ್ ನಿರ್ಮಾಣ ಮಾಡಿಸಿಕೊಡುವಂತೆ ಸ್ಥಳಿಯರು ಮನವಿ ಮಾಡಿದರು. ಸ್ಕೈವಾಕ್ ನಿರ್ಮಾಣದಿಂದ ಬೈರಗಿ ಕಾಲನಿ, ಹಂಪಾಪುರ, ಹೊಸದೊಡ್ಡಿ, ಲಕ್ಷ್ಮೀ ಸಾಗರಗ್ರಾಮಗಳು ಸೇರಿದಂತೆ ಇನ್ನು ಹಲವು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಒಂದು ಕಡೆ ಬಸ್ ಆಟೋ ಇಳಿದರೆ ರಸ್ತೆ ದಾಟಲು ಕಿಲೋಮೀಟರ್ಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಬೇಕು. ಹಾಗಾಗಿ ಸ್ಕೆ$ವಾಕ್ ನಿರ್ಮಾಣ ಮಾಡಿಸಿಕೊಡುವಂತೆ ಒತ್ತಾಯಿಸಿದರು.
ಉತ್ತಮ ಸ್ಪಂದನೆ
ಶೇಷಗಿರಿಹಳ್ಳಿ ಬಳಿ ಅಂಡರ್ ಪಾಸ್ ಹಾಗೂಲಕ್ಷ್ಮೀ ಸಾಗರ ಗೇಟ್ ಬಳಿ ಸ್ಕೈವಾಕ್ ನಿರ್ಮಾಣ ಕುರಿತ ಮನವಿಗೆ ಸ್ಪಂದಿಸಿದ ಸಂಸದರು, ಸ್ಥಳದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಡಿ ಅವರಿಗೆ ಕರೆ ಮಾಡಿ ತುರ್ತಾಗಿ ಈ ಎರಡು ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ತಾಕೀತು ಮಾಡಿದರು.
ಈ ವೇಳೆ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್, ಆನಂದ, ಸತೀಶ್, ಮುಖಂಡರಾದ ಶೇಷಪ್ಪ, ಶಿವಣ್ಣ, ನರಸಿಂಹಯ್ಯ ಇತರರು ಇದ್ದರು.