ಹನುಮಸಾಗರದ ಹಳೇ ಸಂತೆ ಬಜಾರ್‌ನಲ್ಲಿ ಪ್ರತಿಭಟನಾ ನಿರತ ಮಹಿಳೆಯರು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರೊಂದಿಗೆ ವಾಗ್ವಾದ ನಡೆಸಿದರು. ಸದಸ್ಯರಾದ ಬಸವರಾಜ ಬಿಲ್ಕಾರ, ಭವಾನಿಸಾ ಪಾಟೀಲ್, ತಿಮ್ಮನಗೌಡ ಪೊಲೀಸ್ ಪಾಟೀಲ್, ಶ್ರೀಶೈಲ ಮೋಟಗಿ, ನಾಗರಾಜ ಕಂದಗಲ್ ಇದ್ದರು. 
ಜಿಲ್ಲೆ

ಶೌಚಗೃಹ ತಡೆಗೋಡೆ ಕೆಡವಿದವರ ವಿರುದ್ಧ ಕ್ರಮವಾಗಲಿ

ಹನುಮಸಾಗರ: ಗ್ರಾಮದ ಹಳೇ ಸಂತೆ ಬಜಾರ್‌ನ ಸಾರ್ವಜನಿಕ ಮಹಿಳಾ ಶೌಚಗೃಹ ತಡೆಗೋಡೆ ಕೆಡವಿದ್ದಕ್ಕಾಗಿ ಶನಿವಾರ ಮಹಿಳೆಯರು ಪ್ರತಿಭಟನೆ ನಡೆಸಿದರು.


ಸಂತೆ ಬಜಾರ ಸುತ್ತಮುತ್ತಲಿನ 4,5,6 ಮತ್ತು 7ನೇ ವಾರ್ಡ್ ಮಹಿಳೆಯರು ಸಾರ್ವಜನಿಕ ಶೌಚಗೃಹ ಅವಲಂಬಿಸಿದ್ದಾರೆ. ಆದರೆ ಕಿಡಿಗೇಡಿಗಳು ಶೌಚಗೃಹದ ತಡಗೋಡೆ ಕೆಡವಿದ್ದಾರೆ. ನಾಲ್ಕೈದು ದಿನಗಳಿಂದ ತಡೆಗೋಡೆ ಇಲ್ಲದ ಕಾರಣ ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವಂತಾಗಿದೆ. ಈ ಹಿಂದೆಯೂ ಸಾರ್ವಜನಿಕ ಮಹಿಳಾ ಶೌಚಗೃಹದ ತಡೆಗೋಡೆ ಕೆಡವಲಾಗಿತ್ತು. ಗ್ರಾಪಂಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಮಾತನಾಡಿ, ಮಹಿಳಾ ಶೌಚಗೃಹದ ತಡೆಗೋಡೆ ಕೆಡವಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗ್ರಾಪಂನಿಂದ ಕೂಡಲೇ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.