ಹುಕ್ಕೇರಿ: ಕೋಲ್ಕತದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಪಟ್ಟಣದ ವಿವಿಧ ಮಹಿಳಾ ಸಂಘಟನೆ ಸದಸ್ಯರು ಶನಿವಾರ ಮೊಂಬತ್ತಿ ಮೆರವಣಿಗೆ ಜತೆಗೆ ಮೌನ ಪ್ರತಿಭಟನೆ ನಡೆಸಿದರು.
ಶೀಲಾ ಖಾಂಡೆ, ಮಂಜುಳಾ ಅಡಕೆ, ಭಕ್ತಿ ಕೋರೆ, ಡಾ.ಜಯಶ್ರೀ ಚರಂತಿಮಠ ಮತ್ತು ಪ್ರಿಯಾ ಖತಗಲ್ಲಿ ಮಾತನಾಡಿ, ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಮಹಿಳೆಯರು ಒಂಟಿಯಾಗಿ ಸಂಚರಿಸುವಾಗ ಸುರಕ್ಷಿತೆ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಮಳೆ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೊಂಬತ್ತಿ ಹಿಡಿದು ಸಂಚರಿಸಿ ಕೋರ್ಟ್ ವೃತ್ತ ತಲುಪಿದರು. ಅಲ್ಲಿ ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿದರು. ಮೇಘನಾ ಸಬನೀಸ, ಭಾರತಿ ಹುಕ್ಕೇರಿ, ಅರ್ಪಿತಾ ಕುಲಕರ್ಣಿ, ಶ್ವೇತಾ ಸೊಲ್ಲಾಪುರೆ, ಸುಷ್ಮಾ ಬೋಂಗಾಳೆ, ಅರುಂದತಿ ಸಬನೀಸ, ಆರ್ಚನಾ ಕಾಲಕುಂದ್ರಿ ಇತರರಿದ್ದರು.