ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಉಪಾಧ್ಯಕ್ಷ ಭೀಮೇಶ ನಾಯಕ, ನಗರ ಘಟಕ ಅಧ್ಯಕ್ಷ ಭೀಮೇಶ ಆರ್.ನಾಯಕ, ಮೌನೇಶ ಬುಳ್ಳಾಪುರ, ಸಲೀಂಖಾನ್, ಅಶೋಕ ನಾಯಕ, ಶಿವು ಪತ್ತಾರ, ನಾಗರಾಜ ಗುತ್ತೇದಾರ, ಸಿದ್ದು ಛಲವಾದಿ, ಪ್ರೇಮಕುಮಾರ ಪಾಟೀಲ್, ಧನರಾಜ ಇತರರಿದ್ದರು. 
ಜಿಲ್ಲೆ

ಪುಂಡರ ವಿರುದ್ಧ ಕ್ರಮ ಕೈಗೊಳ್ಳಲಿ

ಲಿಂಗಸುಗೂರು: ಬೆಳಗಾವಿಯಲ್ಲಿ ರಾಜ್ಯ ಸಾರಿಗೆ ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಮಂಗಳವಾರ ಮನವಿ ಸಲ್ಲಿಸಿದರು.

ಕನ್ನಡ ಮಾತನಾಡಿ, ಎಂದಿದ್ದಕ್ಕೆ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದಾರೆ. ಅದೇ ಪುಂಡರು ನಿರ್ವಾಹಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಮರಾಠಿ ಭಾಷೆಯಲ್ಲಿ ಎಲ್ಲ ದಾಖಲೆ ನೀಡುವುದಾಗಿ ವಾಗ್ದಾನ ನೀಡಿರುವುದು ಕನ್ನಡ ವಿರೋಧಿ ನೀತಿ ಎದ್ದು ಕಾಣುತ್ತಿದೆ. ಕೂಡಲೇ ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.