ಜಿಲ್ಲೆ

ಕಣ್ಣಿನ ಆರೋಗ್ಯದ ಕಡೆ ಗಮನವಿರಲಿ

ಪ್ರವೀಣ ಉದುಸಾ ದಲಬಂಜನ್

ಕುಷ್ಟಗಿ: ವಯಸ್ಸಾದಂತೆ ಕಣ್ಣಿನ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕೆ.ಎಸ್.ರೆಡ್ಡಿ ಸಲಹೆ ನಿಡಿದರು.

ಪಟ್ಟಣದ ತಾಪಂ ಕಚೇರಿಯ ವಿಕಲಚೇತನರ ಪುನರ್ವಸತಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಡಳಿತ, ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕುಡುಮಶ್ರೀ 4ಜಿ ದಿವ್ಯಾಂಗರ ಶಿಕ್ಷಣ, ಕಲ್ಯಾಣ ಸಂಸ್ಥೆ ಗ್ರಾಮೀಣ, ನಗರ ವಿಕಲಚೇತನರ ಪುನರ್ವಸತಿ ಕಾರ್ಯರ್ಯಕರ್ತರ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಯೋಸಹಜ ಕಾಯಿಲೆಗಳ ಜತೆ ದೃಷ್ಟಿ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಉದಾಸೀನ ತೋರದೆ ನೇತ್ರ ತಜ್ಞರ ಬಳಿ ತೆರಳಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಇದರಿಂದ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ ಎಂದರು.

ಎಂಆರ್‌ಡಬ್ಲುೃ ಚಂದ್ರಶೇಖರ ಹಿರೇಮನಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿನ ಹಿರಿಯ ನಾಗರಿಕರ ಕಣ್ಣಿನ ತಪಾಸಣೆ ಮಾಡುವ ಮೂಲಕ ಕನ್ನಡಕ ವಿತರಿಸಲಾಗಿದೆ ಎಂದರು. ಕೊಪ್ಪಳ ಲಯನ್ಸ್ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಮನೋಹರ ಪತ್ತಾರ 35 ಹಿರಿಯ ನಾಗರಿಕರ ಕಣ್ಣಿನ ತಪಾಸಣೆ ಮಾಡಿ, ಆ ಪೈಕಿ 16 ಜನರಿಗೆ ಕಣ್ಣಿನ ಪೊರೆ ಬಂದಿರುವ ಬಗ್ಗೆ ತಿಳಿಸಿದರು.

ಕುಡಿಮಶ್ರೀ 4ಜಿ ಸಂಸ್ಥೆಯ ಅಧ್ಯಕ್ಷ ಕಿರಣ್ ಜ್ಯೋತಿ, ಎಂಆರ್‌ಡಬ್ಲುೃ ಹಾಗೂ ವಿಆರ್‌ಡಬ್ಲುೃ ಒಕ್ಕೂಟದ ಜಿಲ್ಲಾಧ್ಯಕ್ಷ ಆದಪ್ಪ ಮಾಲಿಪಾಟೀಲ್, ತಾಲೂಕು ಆಸ್ಪತ್ರೆ ಲ್ಯಾಬ್ ತಂತ್ರಜ್ಞ ಬಾಲಾಜಿ ಬಳಿಗಾರ, ವಿಆರ್‌ಡಬ್ಲುೃ ಶಿವಯ್ಯ ಗದ್ದಡಕಿಮಠ, ಬಸವರಾಜ ಗಾಣಿಗೇರ ಇತರರಿದ್ದರು.