ಜಿಲ್ಲೆ

ಕೆರೆಪಾಳ್ಯದಲ್ಲಿ ಕಾಣಿಸಿಕೊಂಡ ಚಿರತೆ !

ಬೆಂಗಳೂರು ಗ್ರಾಮಾಂತರ ಡೆಸ್ಕ್

ದಾಬಸ್​ಪೇಟೆ: ನೆಲಮಂಗಲ ತಾಲೂಕಿನ ಕೆರೆಪಾಳ್ಯದ ಶಿವರಾಮ್​ ಎಂಬುವವರ ಮನೆಯ ಹತ್ತಿರ ಚಿರತೆ ಕಾಣಿಸಿಕೊಂಡಿದ್ದು, ಮಕ್ಕಳು ಮೊಬೈಲ್​ನಲ್ಲಿ ಅದರ ವಿಡಿಯೋ ಸೆರೆಹಿಡಿದಿದ್ದಾರೆ. ಏಳೆಂಟು ತಿಂಗಳ ಹಿಂದೆ ಬೆಟ್ಟದ ತಪ್ಪಲು ಹಾಗೂ ಕೆರೆಪಾಳ್ಯ, ಹೆಗ್ಗುಂದದ ಬಳಿ ಚಿರತೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯವರು ಬೋನಿಟ್ಟು ಒಂದು ಚಿರತೆ ಸೆರೆ ಹಿಡಿದಿದ್ದರು. ಆದರೆ ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಭಯ ಉಂಟುಮಾಡಿದೆ.