ರೌಡಕುಂದ ಗುಡ್ಡದಲ್ಲಿ ಚಿರತೆ ಕಾಣಿಸಿ ಕೊಂಡ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು. 
ಜಿಲ್ಲೆ

ರೌಡಕುಂದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ

ಸಿಂಧನೂರು: ತಾಲೂಕಿನ ರೌಡಕುಂದ ಗ್ರಾಮದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸು ಮೇಲೆ ದಾಳಿ ಮಾಡಿ ಕೊಂದಿದೆ. ಅಲ್ಲದೆ ಎರಡು ಆಡುಗಳನ್ನು ಗಾಯಗೊಳಿಸಿದೆ.

ಗುಡ್ಡದಲ್ಲಿ ಶನಿವಾರ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಆಕಳನ್ನು ಪರಚಿ ಕೊಂದಿದೆ. ಜತೆಗೆ ಎರಡು ಆಡುಗಳ ಮೇಲೆ ದಾಳಿ ಮಾಡಿ ಪರಚಿದೆ. ಸ್ಥಳಕ್ಕೆ ಆರ್‌ಎಫ್‌ಒ ಪುರುಷೋತ್ತಮ ನೇತೃತ್ವದ ತಂಡ ಆಗಮಿಸಿ ಗುಡ್ಡದಲ್ಲಿ ಹುಡುಕಾಟ ನಡೆಸಿ, ಬೋನು ಅಳವಡಿಸಿದೆ.ಗುಡ್ಡದ ಪಕ್ಕದಲ್ಲಿಯೇ ಮನೆಗಳಿರುವುದರಿಂದ ಜನರು ಭಯಗೊಂಡಿದ್ದಾರೆ.