ಹನೂರು: ತಾಲೂಕಿನ ಪಿ.ಜಿ ಪಾಳ್ಯ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಬೂದಿಪಡಗ ಬಳಿಯ ರಸ್ತೆಯಲ್ಲಿ ಗುರುವಾರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಇದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ರಾತ್ರಿ ಸುಮಾರು 11.30ರ ವೇಳೆಯಲ್ಲಿ ಚಿರತೆಯೊಂದು ರಸ್ತೆ ಬದಿಯಲ್ಲಿ ಕುಳಿತಿದ್ದು, ವಾಹನವೊಂದು ಆಗಮಿಸಿದ ಕೂಡಲೇ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸಿ ಅರಣ್ಯ ಪ್ರದೇಶದೊಳಗೆ ತೆರಳಿದೆ. ಈ ದೃಶ್ಯವನ್ನು ವಾಹನ ಸವಾರರೊಬ್ಬರೂ ಸೆರೆ ಹಿಡಿದಿದ್ದು, ಹನೂರು ಸೋಶಿಯಲ್ ಮೀಡಿಯಾ ಫೇಸ್‌ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಒಡೆಯರಪಾಳ್ಯ, ಲೊಕ್ಕನಹಳ್ಳಿ, ಬೂದಿಪಡಗ, ಹೊಸದೊಡ್ಡಿ ಹಾಗೂ ಈ ಭಾಗದ ಬೈಕ್ ಸವಾರರು ರಾತ್ರಿ ವೇಳೆ ಎಚ್ಚರದಿಂದ ಸಂಚರಿಸುವಂತೆ ಸಲಹೆ ನೀಡಲಾಗಿದೆ.