ಜಮಖಂಡಿ ತಾಲೂಕಿನ ಕುಂಚನೂರ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ.  
ಜಿಲ್ಲೆ

ಕುಂಚನೂರನಲ್ಲಿ ಚಿರತೆ ಪ್ರತ್ಯಕ್ಷ

ವಿನಯ ಆಶೋಕ ನಾಯ್ಕ

ಜಮಖಂಡಿ: ತಾಲೂಕಿನ ಕುಂಚನೂರ ಗ್ರಾಮದ ಗುರವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ.

ಸ್ಥಳೀಯ ರೈತರೊಬ್ಬರು ಟ್ಯ್ರಾಕ್ಟರ್ ಚಲಾಯಿಸಿಕೊಂಡು ತೆರಳುತಿದ್ದಾಗ ರಸ್ತೆ ದಾಟುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕಳೆದ ಜನವರಿಯಲ್ಲಿ ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಸ್ಥಳಕ್ಕೆ ಜಮಖಂಡಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.