chirate 
ಜಿಲ್ಲೆ

ಬಾವಿಗೆ ಬಿದ್ದ ಚಿರತೆ ರಕ್ಷಣೆ

ರೇಷ್ಮೆ ನಗರ ಡೆಸ್ಕ್

ಮಾಗಡಿ: ತಾಲೂಕಿನ ಹಾಲಶೆಟ್ಟಿಹಳ್ಳಿಯ ಅಡಿಕೆ ರೇವಣ್ಣ ಎಂಬುವರ ತೋಟದ ಬಾವಿಗೆ ಬಿದ್ದಿದ್ದ 5 ವರ್ಷದ ಹೆಣ್ಣು ಚಿರತೆಯನ್ನು ರಸಲಾಗಿದೆ.

ಶನಿವಾರ ರಾತ್ರಿಯೇ ಬಾವಿಗೆ ಚಿರತೆ ಬಿದ್ದಿದ್ದು, ಭಾನುವಾರ ಬೆಳಗ್ಗೆ ವಿಷಯ ತಿಳಿದಿದೆ. ಮಧ್ಯಾಹ್ನ ಡಿಎಫ್​ಒ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ ಚಿರತೆಯ ಚಲನವಲನ ಗಮನಿಸಿ ಬಾವಿಗೆ ಬೋನು ಬಿಟ್ಟು ಚಿರತೆಯನ್ನು ರಸಲಾಗಿದೆ. ಇನ್ನು ಚಿರತೆಯ ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಬನ್ನೆರುಟ್ಟ ರೆಸ್ಕ್ಯೂ ಸೆಂಟರ್​ಗೆ ರವಾನಿಸಲಾಗಿದೆ. ಕಾಳೇರಿ ಕಾವಲ್​ ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ಎಸಿಎಫ್​ ಪುಟ್ಟಮ್ಮ, ಆರ್​ಎಫ್​ಒ ಚೈತ್ರಾ ಮನ್ಸೂರ್​, ಡಿಆರ್​ಎಫ್​ಒ ಶ್ರೀನಿವಾಸ್​, ಅರುಣ್​, ಉಮೇಶ್​, ಕಿರಣ್​, ಗೋವಿಂದರಾಜು ಇದ್ದರು.