ಜಿಲ್ಲೆ

ಗದಗ: ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷ. ಆತಂಕದಲ್ಲಿ ಜನರು.

Gadag - Shivanand Hiremath

ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಬೆಟ್ಟದ ಬಳಿ ಚಿರತೆ ಕಾಣಿಸಿಕೊಂಡಿದ್ದು, ತೈರೇಪ್ಪ ಮಾಳೂತ್ತರ ಎನ್ನುವ ರೈತನಿಗೆ ಸೇರಿದ ಆಕಳು ಹಾಗೂ ಕರುವಿನ ಮೇಲೆ ದಾಳಿ ಮಾಡಿದೆ.

ಚಿರತೆಯನ್ನು ಪತ್ತೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.