ಕಾಳೆನಹಳ್ಳಿಯಲ್ಲಿ ಪತ್ತೆಯಾಗಿರುವ ಹೆಜ್ಜೆ ಗುರುತನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು. 
ಜಿಲ್ಲೆ

ಕಾಳೇನಹಳ್ಳಿಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ

ನಾಗೇಶ ಎಸ್

ಹನಗೋಡು: ಹೋಬಳಿಯ ಗುರುಪುರ ಗ್ರಾಪಂ ವ್ಯಾಪ್ತಿಯ ಕಾಳೆನಹಳ್ಳಿಯ ಜಮೀನಿನಲ್ಲಿ ಚಿರತೆ ಅಡ್ಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ರೈತರು ಆತಂಕದಲ್ಲಿದ್ದಾರೆ.

ಗ್ರಾಮದ ನಟೇಶ್ ಹಾಗೂ ಅಕ್ಕಪಕ್ಕದ ಜಮೀನಿನಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಆತಂಕಗೊಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದು ಚಿರತೆ ಹೆಜ್ಜೆಯಾಗಿದೆ. ಕಾಳೇನಹಳ್ಳಿಗೆ ಸಮೀಪದ ಬಲ್ಲೇನಹಳ್ಳಿಯಲ್ಲಿ ಚಿರತೆ ಕೋಳಿ ಹಾಗೂ ಬೀದಿನಾಯಿಯನ್ನು ಭೇಟೆಯಾಡಿರುವ ಬಗ್ಗೆ ಮಾಹಿತಿ ಇದ್ದು, ಸೆರೆಗೆ ಎರಡೂ ಗ್ರಾಮಗಳ ಮಧ್ಯದಲ್ಲಿ ಬೋನು ಇಡಲಾಗಿದೆ ಎಂದು ಆರ್‌ಎಫ್‌ಒ ನಂದಕುಮಾರ್ ತಿಳಿಸಿದ್ದಾರೆ.