ಮಾಗಡಿ. ಪಟ್ಟಣದ ಸುತ್ತಮುತ್ತಲ ಜನರ ನೆಮ್ಮದಿ ಕೆಡಸಿದ ಚಿರತೆಯನ್ನು ಸೆರೆ ಇಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಪಟ್ಟಣದ ಗವಿ ಗಂಗಾಧರೇಶ್ವರ ದೇವಾಲಯದ ಬಳಿಯ ಪುರಸಭೆ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ರೇವಣ್ಣ ಅವರ 5 ಮೇಕೆ, 20 ಕೋಳಿ ಸೇರಿದಂತೆ ಬೀದಿ ನಾಯಿಗಳನ್ನು ನಿರಂತರವಾಗಿ ಸಾಯಿಸುತಿತ್ತು.
ಜಡೇದೇವರ ಮಠಕ್ಕೆ ಬರುವ ಭಕ್ತರಿಗೆ ಭಯಬೀತಿಗೊಳಿಸಿ ಹಾಡು ಹಗಲೆ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿ ಜನತೆ ಓಡಾಡದಂತಹ ಸ್ಥಿತಿಗೆ ತಲುಪಿದ್ದರು. ಈ ಸಂಬಂಧ ಯುವ ರೈತಸಂಘದ ಅಧ್ಯಕ್ಷ ರವಿಕುಮಾರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನಲೆಯಲ್ಲಿ ಜಯಲಕ್ಷ್ಮಿ ರೇವಣ್ಣ ಅವರ ಜಮೀನಿನಲ್ಲಿ ಕಳೆದ 20 ದಿನಗಳ ಹಿಂದೆ ಬೋನು ಇಡಿಲಾಗಿತ್ತು.
ಮಂಗಳವಾರ ಮುಂಜಾನೆ ಸುಮಾರು 4 ವರ್ಷದ ಹೆಣ್ಣು ಚಿರತೆ ಸೆರೆಯಾಗಿರುವುದರೊಂದಿಗೆ ಸಾರ್ವಜನಿಕರು, ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.