ಜಿಲ್ಲೆ

ಮೈಸೂರಿನಲ್ಲಿ ಚಿರತೆ ಸೆರೆ

Mysuru

ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಮಾರ್ಬಳ್ಳಿಯಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಶನಿವಾರ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಸೆರೆಸಿಕ್ಕಿದೆ.

ಗ್ರಾಮದಲ್ಲಿ ಚಿರತೆ ಸಂಚರಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಿತು. ಹೀಗಾಗಿ ಚಿರತೆ ಸೆರೆ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗ್ರಾಮದ ಮಹದೇವಮ್ಮ ಅವರ ಜಮೀನಿನಲ್ಲಿ ಬೋನು ಇರಿಸಲಾ ಗಿತ್ತು. ಸೆರೆ ಸಿಕ್ಕ ಹೆಣ್ಣು ಚಿರತೆಗೆ ಮೂರರಿಂದ ನಾಲ್ಕು ವರ್ಷ ಇರಬಹುದೆಂದು ಅಂದಾಜಿಸಲಾಗಿದೆ.