ದೊಡ್ಡಬಳ್ಳಾಪುರದ ಬೂಚನಹಳ್ಳಿ ಗ್ರಾಮದಲ್ಲಿ ಮರದ ದಿಮ್ಮಿ ಕೆಳಗೆ ಅವಿತುಕೊಂಡಿದ್ದ ಚಿರತೆ. 
ಜಿಲ್ಲೆ

ಬೂಚನಹಳ್ಳಿಯಲ್ಲಿ ಚಿರತೆ ಸೆರೆ

ದೊಡ್ಡಬಳ್ಳಾಪುರ : ಹುಲಿಕುಡಿ ಬೆಟ್ಟದ ತಪ್ಪಲಿನ ಬೂಚನಹಳ್ಳಿ ಅಂಚಿನ ತೋಟಗಳಲ್ಲಿ ಗುರುವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿದಿದ್ದಾರೆ. ಬೂಚನಹಳ್ಳಿ ಸಮೀಪದ ಓಡಾಡುತ್ತಿದ್ದ ಚಿರತೆ ನೋಡಿದ ಗ್ರಾಮಸ್ಥರು ಕೂಗಾಡಿದರೂ ಅದು ಹೋಗಲಿಲ್ಲ. ವಿಷಯ ತಿಳಿದ ಜಿಲ್ಲಾ ಉಪಅರಣ್ಯ ಸಂಕ್ಷಣಾಧಿಕಾರಿ ಸಂತೋಷ ಕುಮಾರ್​, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್​ ನಿಜಾಮುದ್ದೀನ್​, ಬನ್ನೇರುಘಟ್ಟ ಉದ್ಯಾನದ ಡಾ.ಕಿರಣ್​ ಹಾಗೂ ವಲಯ ಅರಣ್ಯ ಅಧಿಕಾರಿ ಹಂಸವಿ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳದ, ಪೊಲೀಸ್​ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಚಿರತೆಯೂ ಕೊಟ್ಟಿಗೆಯ ಸಮೀಪದಲ್ಲೇ ಇದ್ದ ಹುಲ್ಲಿನ ಬಣವೆ ಕೆಳಗಡೆ ಅವಿತುಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಅರಿವಳಿಕೆ ಚುಚ್ಚು ಮದ್ದು ನೀಡಿ ಚಿರತೆ ಸೆರೆಹಿಡಿದರು.