ಮಾಗಡಿ: ತಾಲೂಕಿನ ಹಲಸಬೆಲೆಯ ಮನೆ ಕಾಂಪೌಂಡ್ನೊಳಗಿದ್ದ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ.
ಗ್ರಾಮದ ಸಂಸತ ಶಿಕ್ಷಕ ಗಂಗಾಧರ್ ಅವರು ಮನೆಯ ಕಾಂಪೌಂಡನೊಳಗೆ ನಾಯಿ ಬಿಟ್ಟಿದ್ದರು. ಶುಕ್ರವಾರ ತಡರಾತ್ರಿ ಕಾಂಪೌಂಡ್ ಹಾರಿ ಒಳ ನುಗ್ಗಿದ ಚಿರತೆ ನಾಯಿ ಮೇಲೆ ದಾಳಿ ನಡೆಸಿದೆ. ನಾಯಿಯ ನರಳಾಟ ಕೇಳಿ, ಗಂಗಾಧರ್ ಹೊರಬಂದು ಕೂಗಾಡಿದ್ದು, ಚಿರತೆ ಕಾಲ್ಕಿತ್ತಿದೆ. ಚಿರತೆ ಕಾಂಪೌಂಡ್ ಒಳಹೊಕ್ಕು ನಾಯಿ ಮೇಲೆ ದಾಳಿ ಮಾಡಿದ ದೃಶ್ಯ ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ಗಂಗಾಧರ್ ಮನವಿ ಮಾಡಿದರು.