ಗುಳೇದಗುಡ್ಡ: ಲಾಯದಗುಂದಿ ಗ್ರಾಮದ ಜಮೀನಿನೊಂದರಲ್ಲಿ ಮಂಗಳವಾರ ರಾತ್ರಿ ಚಿರತೆ ದಾಳಿಗೆ ಕಟ್ಟಿಹಾಕಿದ್ದ ಸಾಕು ನಾಯಿ ಬಲಿಯಾಗಿದೆ.
ಲಾಯದಗುಂದಿ ಗ್ರಾಮದ ಈರಪ್ಪ ಬಸವಂತಪ್ಪ ಅಂಗಡಿ ಅವರ ಹೊಲದಲ್ಲಿ ಕಾವಲಿದ್ದ ನಾಯಿಯನ್ನು ಅರ್ಧ ತಿಂದು ಇನ್ನರ್ಧ ಕಳೆಬರಹ ಬಿಟ್ಟು ಹೋಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳಕ್ಕೆ ಬಾದಾಮಿ ಅರಣ್ಯ ವಲಯಾಧಿಕಾರಿ ಮಹೇಶ ಮರಿಯನ್ನವರ, ಉಪವಲಯಾಧಿಕಾರಿ ಆರ್.ಎಸ್. ಹೊಸಮನಿ ಭೇಟಿ ಪರಿಶೀಲಿಸಿದರು.
ಕಳೆದ ಒಂದು ತಿಂಗಳಿನಿಂದ ಸಮೀಪದ ಪಟ್ಟದಕಲ್ಲ, ಕಾಟಾಪುರ, ನಾಗಾರಳ ಎಸ್.ಪಿ. ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಂಡು ಭಯಹುಟ್ಟಿಸಿದ್ದ ಚಿರತೆ ಹಲವಾರು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಚಿತರೆ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮ ದೂರಿದ್ದಾರೆ.